ರಾಜ್ಯದ ಗ್ರಾಮೀಣ ಭಾಗದ ರೈತರಿಗೆ ರಾಜ್ಯ ಸರ್ಕಾರ ಖುಷಿ ಸುದ್ದಿ ನೀಡಿದ್ದು, ಸರ್ಕಾರವು ನಿನ್ನೆ ಕರ್ನಾಟಕ ಭೂ ಕಬಳಿಕೆ ನಿಷೇಧ(ತಿದ್ದುಪಡಿ) ಕಾಯಿದೆ ಮಂಡಿಸಿದ್ದು, ಕಲಂ 2(d) ರದ್ದುಪಡಿಸಲು ಮುಂದಾಗಿದೆ.
ಒಂದು ವೇಳೆ ಇದಕ್ಕೆ ಅಂಗೀಕಾರ ಸಿಕ್ಕಿದ್ದೇ ಆದಲ್ಲಿ ಗ್ರಾಮೀಣ ಭಾಗದಲ್ಲಿ ಒತ್ತುವರಿ ಮಾಡಿಕೊಂಡ ರೈತರು ನಿಟ್ಟುಸಿರು ಬಿಡಲಿದ್ದಾರೆ. ಈ ತಿದ್ದುಪಡಿಯಿಂದ ರೈತರ ವಿರುದ್ಧ ಈವರೆಗೆ ದಾಖಲಾಗುತ್ತಿದ್ದ ಕ್ರಿಮಿನಲ್ ಮೊಕದ್ದಮೆ ದಾಖಲಾಗಲ್ಲ ಮತ್ತು ರೈತರು ನ್ಯಾಯಾಲಯಕ್ಕೆ ಬೆಂಗಳೂರಿಗೆ ಅಲೆಯುವುದೂ ತಪ್ಪಲಿದೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.