ಬೆಂಗಳೂರು: ಕೃಷಿ ಮಸೂದೆ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ ಮಾಡುವ ರೈತರು ಭಯೋತ್ಪಾದಕರೆಂದು ಕರೆದಿದ್ದ ಬಾಲಿವುಡ್ ನಟಿ ಕಂಗನಾ ರನೌತ್‌ಗೆ ಕರ್ನಾಟಕ ನ್ಯಾಯಾಲಯ ದೊಡ್ಡ ಶಾಕ್ ನೀಡಿದೆ.
ನಟಿ ಕಂಗನಾ ರನೌತ್ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಕರ್ನಾಟಕದ ಸ್ಥಳೀಯ ನ್ಯಾಯಾಲಯ ಪೊಲೀಸರಿಗೆ ಸೂಚಿಸಿದೆ ಎನ್ನಲಾಗಿದ್ದು, ಕ್ಯಾತಸಂದ್ರ ಪೊಲೀಸ್ ಠಾಣೆ ಅಧಿಕಾರಿಗಳಿಗೆ ದೂರಿನ ಪ್ರತಿಯನ್ನು ನೀಡುವಂತೆ ಆದೇಶಿಸಿದೆ ಎನ್ನಲಾಗಿದೆ. ತುಮಕೂರಿನ ವಕೀಲಾರದ ಎಲ್ ರಮೇಶ್ ನಾಯಕ್ ಎಂಬುವರು ನೀಡಿದ ದೂರಿನ ಹಿನ್ನೆಲೆಯಲ್ಲಿ ನ್ಯಾಯಾಲಯ ಕ್ರಮ ಕೈಗೊಂಡಿದೆ ಎನ್ನಲಾಗಿದೆ.
ಕೃಷಿ ಮಸೂದೆಗಳ ವಿರುದ್ಧ ಪ್ರತಿಭಟಿಸುವವರನ್ನು (ಕಾನೂನು ಜಾರಿಗೆ ಬರುವ ಮೊದಲು) ಭಯೋತ್ಪಾದಕರು ಎಂದು ಹೋಲಿಸಿ ಕಂಗನಾ ಸೆಪ್ಟೆಂಬರ್ 21 ರಂದು ಟ್ವೀಟ್ ಮಾಡಿದ್ದರು. ಪ್ರತಿಭಟನೆಗೆ ಕಾರಣವಾದ ಸಿಎಎ ಬಗ್ಗೆ ತಪ್ಪು ಮಾಹಿತಿ ಮತ್ತು ವದಂತಿಗಳನ್ನು ಹರಡಿದ ಜನರು ಈಗ ರೈತರ ಮಸೂದೆಯ ಬಗ್ಗೆ ತಪ್ಪು ಮಾಹಿತಿ ಹರಡುತ್ತಿದ್ದಾರೆ ಮತ್ತು ರಾಷ್ಟ್ರದಲ್ಲಿ ಭಯೋತ್ಪಾದನೆಯನ್ನು ಉಂಟುಮಾಡುತ್ತಿದ್ದಾರೆ, ಅವರು ಭಯೋತ್ಪಾದಕರು ಎಂದು ಕಂಗನಾ ಟ್ವೀಟ್ ಮಾಡಿದ್ದರು.
ನಟಿ ಕಂಗಾನರ ಈ ಹೇಳಿಕೆಯನ್ನು ವಿರೋಧಿಸಿ ತುಮಕೂರಿನ ವಕೀಲಾರದ ಎಲ್ ರಮೇಶ್ ನಾಯಕ್ ಎಂಬುವರು ನೀಡಿದ ದೂರು ನೀಡಿದ್ದರು.
ಇದನ್ನು ಓದಿ: ದಲಿತ ಶಾಸಕನ ಅಂತರ್ಜಾತಿ ವಿವಾಹ; ಮಹತ್ವದ ತೀರ್ಪು ನೀಡಿದ ಹೈಕೋರ್ಟ್..!
People who spread misinformation and rumours about CAA that caused riots are the same people who are now spreading misinformations about Farmers bill and causing terror in the nation, they are terrorists. You very well know what I said but simply like to spread misinformation 🙂 https://t.co/oAnBTX0Drb
— Kangana Ranaut (@KanganaTeam) September 21, 2020