Bank Holidays | ಮಾರ್ಚ್ ತಿಂಗಳು ಹಬ್ಬಗಳ ಸರಣಿಯನ್ನೇ ಹೊತ್ತು ತಂದಿದೆ. 2026ರ ಮಾರ್ಚ್ ತಿಂಗಳಲ್ಲಿ ಯುಗಾದಿ, ರಂಜಾನ್, ಹೋಳಿ ಸೇರಿದಂತೆ ಸಾಲು ಸಾಲು ಹಬ್ಬಗಳ ಹಿನ್ನೆಲೆಯಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ ಬ್ಯಾಂಕ್‌ಗಳಿಗೆ ಒಟ್ಟು 11 ದಿನಗಳ ಕಾಲ ರಜೆ ಇರಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (RBI) ತಿಳಿಸಿದೆ.
ಪ್ರಮುಖ ಸೂಚನೆ: ಮಾರ್ಚ್ ಆರ್ಥಿಕ ವರ್ಷದ ಕೊನೆಯ ತಿಂಗಳಾಗಿರುವುದರಿಂದ ವಹಿವಾಟುಗಳು ಹೆಚ್ಚಿರುತ್ತವೆ. ರಜೆ ಪಟ್ಟಿ ನೋಡಿ ನಿಮ್ಮ ಬ್ಯಾಂಕ್ ಕೆಲಸಗಳನ್ನು ಇಂದೇ ಪ್ಲಾನ್ ಮಾಡಿಕೊಳ್ಳಿ.
ಇದನ್ನೂ ಓದಿ: Gold Rate Today: ಯುದ್ಧದ ಆತಂಕದ ನಡುವೆಯೂ ದಿಢೀರ್ ಪಾತಾಳಕ್ಕಿಳಿದ ಬಂಗಾರದ ಬೆಲೆ, ಇಂದಿನ ರೇಟ್ ಎಷ್ಟು?
ಮಾರ್ಚ್ 2026 ಬ್ಯಾಂಕ್ ರಜೆ ಪಟ್ಟಿ (ಪ್ರಮುಖ ದಿನಾಂಕಗಳು)
| ದಿನಾಂಕ | ಕಾರಣ / ಹಬ್ಬ | ವಿವರಣೆ |
|---|---|---|
| ಮಾರ್ಚ್ 03 | ಹೋಳಿ (ಧುಲೇಟಿ) | ದೇಶಾದ್ಯಂತ ರಜೆ |
| ಮಾರ್ಚ್ 14 | 2ನೇ ಶನಿವಾರ | ಸಾರ್ವತ್ರಿಕ ರಜೆ |
| ಮಾರ್ಚ್ 19 | ಯುಗಾದಿ / ಗುಡಿ ಪಡ್ವಾ | ಕರ್ನಾಟಕ ಸೇರಿ ಹಲವು ರಾಜ್ಯಗಳು |
| ಮಾರ್ಚ್ 21 | ಈದ್-ಉಲ್-ಫಿತರ್ (ರಂಜಾನ್) | ಸಾರ್ವತ್ರಿಕ ರಜೆ |
| ಮಾರ್ಚ್ 26 | ರಾಮನವಮಿ | ಪ್ರಮುಖ ರಾಜ್ಯಗಳಲ್ಲಿ |
| ಮಾರ್ಚ್ 28 | 4ನೇ ಶನಿವಾರ | ಸಾರ್ವತ್ರಿಕ ರಜೆ |
| ಮಾರ್ಚ್ 31 | ಮಹಾವೀರ ಜಯಂತಿ | ಸಕಾರಿ ರಜೆ |
ಇದನ್ನೂ ಓದಿ: ಮಾರ್ಚ್ 3ರಂದು ಅಪರೂಪದ ‘ರಕ್ತ ಚಂದ್ರಗ್ರಹಣ’: ಕರ್ನಾಟಕದಲ್ಲಿ ಗೋಚರಿಸುವ ಸಮಯ, ಪಾಲಿಸಬೇಕಾದ ನಿಯಮಗಳೇನು?
Bank Holidays – ಗ್ರಾಹಕರ ಗಮನಕ್ಕೆ:
- ಕರ್ನಾಟಕದಲ್ಲಿ ರಜೆ: ಮಾರ್ಚ್ 19ರಂದು ಯುಗಾದಿ ಹಬ್ಬ ಇರುವುದರಿಂದ ಕರ್ನಾಟಕದ ಎಲ್ಲಾ ಬ್ಯಾಂಕ್‌ಗಳು ಮುಚ್ಚಿರುತ್ತವೆ.
- ಆನ್‌ಲೈನ್ ಸೇವೆ: ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಮತ್ತು ಎಟಿಎಂ ಸೇವೆಗಳು 24/7 ಲಭ್ಯವಿರುತ್ತವೆ.
- ವಾರದ ರಜೆ: ಇವುಗಳ ಜೊತೆಗೆ ಪ್ರತಿ ಭಾನುವಾರ ಕೂಡ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ.
ಮೂಲ: ಆರ್‍ಬಿಐ(RBI) ಅಧಿಕೃತ ವೆಬ್‌ಸೈಟ್ ಪ್ರಕಾರ. ಸ್ಥಳೀಯ ಹಬ್ಬಗಳಿಗೆ ಅನುಗುಣವಾಗಿ ರಜೆಗಳು ಬದಲಾಗಬಹುದು.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.




