‘ರಾಜಕಾರಣಿಗಳು ರಾಜಕೀಯ ಮಾಡದೇ, ಪಾನಿಪುರಿ ಮಾರಬೇಕೆ?’- ಕಂಗನಾ

ನವದೆಹಲಿ: ರಾಜಕಾರಣಿಗಳು ರಾಜಕೀಯದಲ್ಲಿ ರಾಜಕಾರಣದ ಮಾಡದೇ, ಪಾನಿಪುರಿ ಮಾರಬೇಕೆ? ಎಂದು ಬಿಜೆಪಿ ಸಂಸದೆ ಹಾಗೂ ನಟಿ ಕಂಗನಾ ರಣಾವತ್ ಅವರು ಮಹಾರಾಷ್ಟ್ರದ ಮಾಜಿ ಸಿಎಂ ಉದ್ಧವ್ ಠಾಕ್ರೆ ಅವರು ‘ದ್ರೋಹದ ಬಲಿಪಶು’ ಎಂದು ಕರೆದಿದ್ದ ಜ್ಯೋತಿರ್‌ಮಠದ…

ನವದೆಹಲಿ: ರಾಜಕಾರಣಿಗಳು ರಾಜಕೀಯದಲ್ಲಿ ರಾಜಕಾರಣದ ಮಾಡದೇ, ಪಾನಿಪುರಿ ಮಾರಬೇಕೆ? ಎಂದು ಬಿಜೆಪಿ ಸಂಸದೆ ಹಾಗೂ ನಟಿ ಕಂಗನಾ ರಣಾವತ್ ಅವರು ಮಹಾರಾಷ್ಟ್ರದ ಮಾಜಿ ಸಿಎಂ ಉದ್ಧವ್ ಠಾಕ್ರೆ ಅವರು ‘ದ್ರೋಹದ ಬಲಿಪಶು’ ಎಂದು ಕರೆದಿದ್ದ ಜ್ಯೋತಿರ್‌ಮಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಪರೋಕ್ಷವಾಗಿ ಶಿಂಧೆ ಅವರನ್ನು ‘ವಿಶ್ವಾಸಘಾತುಕ’ ಹಾಗೂ ‘ದ್ರೋಹಿ’ ಎಂದು ಕರೆಯುವ ಮೂಲಕ ಸ್ವಾಮಿ ಅವಿಮುಕ್ತೇಶ್ವರಾನಂದ ಅವರು ಎಲ್ಲರ ಭಾವನೆಗಳಿಗೆ ಘಾಸಿ ಉಂಟುಮಾಡಿದ್ದಾರೆ. ಇನ್ನು ರಾಜಕಾರಣಿಗಳು ರಾಜಕೀಯ ಬಿಟ್ಟು ಪಾನೀಪೂರಿ ಮಾರಬೇಕೆ ಎಂದು ಪ್ರಶ್ನೆ ಮಾಡಿದ್ದಾರೆ.

‘ರಾಜಕಾರಣದಲ್ಲಿ ಮೈತ್ರಿ, ಒಪ್ಪಂದಗಳು, ಮತ್ತು ಪಕ್ಷದ ವಿಭಜನೆ ಹೊಂದಿರುವುದು ತೀರಾ ಸಾಮಾನ್ಯವಾಗಿದೆ ಮತ್ತು ಸಂವಿಧಾನಾತ್ಮಕವಾಗಿದೆ. ಕಾಂಗ್ರೆಸ್ ಪಕ್ಷವು 1907ರಲ್ಲಿ ವಿಭಜನೆಯಾಯಿತು. 1971ರಲ್ಲಿ ಮತ್ತೊಮ್ಮೆ ವಿಭಜನೆಯಾಯಿತು. ರಾಜಕಾರಣಿಗಳು ರಾಜಕೀಯದಲ್ಲಿ ರಾಜಕಾರಣದ ಮಾಡದೇ, ಪಾನಿಪುರಿ ಮಾರಬೇಕೆ?’ ಎಂದು ಪೋಸ್ಟ್ ಮಾಡಿದ್ದಾರೆ.

Vijayaprabha Mobile App free

‘ತನ್ನ ಪ್ರಜೆಗಳನ್ನು ರಾಜನೇ ಶೋಷಿಸಲು ಆರಂಭಿಸಿದರೆ ವಿಶ್ವಾಸಘಾತುಕತನವೇ ಅಂತಿಮವಾದ ಧರ್ಮ ಎಂದು ಧರ್ಮ ಕೂಡ ಹೇಳುತ್ತದೆ. ಇಂತಹ ಕ್ಷುಲ್ಲಕ ಹೇಳಿಕೆಗಳ ಮೂಲಕ ಸ್ವಾಮಿ ಅವಿಮುಕ್ತೇಶ್ವರಾನಂದ ಅವರು ಹಿಂದೂ ಧರ್ಮವನ್ನು ಅವಮಾನಿಸಿದ್ದಾರೆ. ಶಂಕರಾಚಾರ್ಯ ಅವರು ತಮ್ಮ ಮಾತುಗಳು ಹಾಗೂ ಪ್ರಭಾವವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ವಿಶ್ವಾಸಘಾತಕ ಹಾಗೂ ದ್ರೋಹಿ ಎಂದು ಆರೋಪಿಸುವ ಮೂಲಕ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಅವರ ವಿರುದ್ಧ ಅವಹೇಳನಾಕಾರಿ ಪದಗಳನ್ನು ಬಳಸಿ ನಮ್ಮೆಲ್ಲರ ಭಾವನೆಗಳಿಗೂ ಧಕ್ಕೆ ಉಂಟುಮಾಡಿದ್ದಾರೆ’ ಎಂದು ಬದರಿ ಶಂಕರಾಚಾರ್ಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.