ಚೆನ್ನೈ : ಚೆನ್ನೈನಲ್ಲಿ ಅತಿಥೇಯ ಭಾರತದ ತಂಡದ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ನಾಯಕ ಜೋ ರೂಟ್ ಅವರು ದ್ವಿಶತಕ ಗಳಿಸಿದ್ದು, ಈ ಮೂಲಕ 100ನೇ ಟೆಸ್ಟ್ ನಲ್ಲಿ ದ್ವಿಶತಕ ಗಳಿಸಿದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಹೌದು ಅದ್ಭುತ ಫಾರ್ಮ್ ನಲ್ಲಿರುವ ಇಂಗ್ಲೆಂಡ್ ನಾಯಕ ಜೋ ರೂಟ್ ಅವರು ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ತಮ್ಮ ಟೆಸ್ಟ್ ವೃತ್ತಿಜೀವನದ 4ನೇ ದ್ವಿಶತಕ ಗಳಿಸಿದ್ದರು. ರೂಟ್ ತಮ್ಮ ಮೊದಲ, 50ನೇ & 100ನೇ ಟೆಸ್ಟ್ ಭಾರತದ ವಿರುದ್ಧವೇ ಆಡಿರುವುದು ವಿಶೇಷವಾಗಿದೆ.
ಇಂಗ್ಲೆಂಡ್ ಪರ ಜೋ ರೂಟ್ ಅವರು ತಮ್ಮ ಕ್ರಿಕೆಟ್ ವೃತ್ತಿ ಜೀವನದಲ್ಲಿ 148 ಏಕದಿನ, 100 ಟೆಸ್ಟ್ ಹಾಗು 32 ಟಿ-20 ಪಂದ್ಯಗಳನ್ನು ಆಡಿದ್ದಾರೆ. ಜೋ ರೂಟ್ 148 ಏಕದಿನ ಪಂದ್ಯಗಳಿಂದ 5962 ರನ್ ಕಲೆ ಹಾಕಿದ್ದು, 16 ಶತಕ ಮತ್ತು 33 ಅರ್ಧ ಶತಕ ಸಿಡಿಸಿದ್ದಾರೆ. 99 ಟೆಸ್ಟ್ ಪಂದ್ಯಗಳಿಂದ 8249 ರನ್ ಕಲೆಹಾಕಿದ್ದು, ಇದರಲ್ಲಿ 19 ಶತಕ ಮತ್ತು 49 ಅರ್ಧ ಶತಕ ಸಿಡಿಸಿದ್ದಾರೆ. ಇನ್ನು 32 ಟಿ-20 ಪಂದ್ಯಗಳಿಂದ 893 ರನ್ ಸಿಡಿಸಿದ್ದಾರೆ.