‘777 ಚಾರ್ಲಿ’ ಸದ್ಯ ದೇಶಾದ್ಯಂತ ಶ್ವಾನ ಪ್ರಿಯರನ್ನು ಮಂತ್ರಮುಗ್ದಗೊಳಿಸಿದ ಚಿತ್ರವಾಗಿದ್ದು, ಗಾಲಿ ಜನಾರ್ದನ ರೆಡ್ಡಿ ಮತ್ತು ಅವರ ಕುಟುಂಬ ಸಹಾ ಥಿಯೇಟರ್ಗೆ ಬಂದು 777 ಚಾರ್ಲಿ ಸಿನಿಮಾ ವೀಕ್ಷಿಸಿದ್ದಾರೆ.
ವಿಶೇಷವೆಂದ್ರೆ ತಮ್ಮ ನೆಚ್ಚಿನ ಶ್ವಾನ ರಾಖಿ ಜೊತೆ ಸಿನಿಮಾ ನೋಡಿ ರೆಡ್ಡಿ ಭಾವುಕರಾಗಿದ್ದಾರೆ. ಸಿನಿಮಾ ನೋಡಿದ ಬಳಿಕ ತಮ್ಮ ಫೇಸ್ಬುಕ್ ಖಾತೆಯಲ್ಲಿ ಭಾವನಾತ್ಮಕವಾಗಿ ಬರಹವೊಂದನ್ನು ಬರೆದು ಪೋಸ್ಟ್ ಮಾಡಿದ್ದಾರೆ.
ಈ ಕುರಿತು ಫೇಸ್ಬುಕ್ ಖಾತೆಯಲ್ಲಿ ಭಾವನಾತ್ಮಕವಾಗಿ ಬರಹವೊಂದನ್ನು ಬರೆದು ಪೋಸ್ಟ್ ಮಾಡಿರುವ ಜನಾರ್ದನ ರೆಡ್ಡಿ, ಶ್ವಾನದ ನಂಬಿಕೆ ಎಂತಹ ಅದ್ಭುತವಾದದ್ದು ಅಲ್ಲವೇ?
ನನಗೆ ಚಿಕ್ಕ ವಯಸ್ಸಿನಿಂದಲೂ ಶ್ವಾನದ ಮೇಲೆ ಅಪಾರವಾದ ಪ್ರೀತಿ, ಗೋವಿನ ಮೇಲೆ ಭಕ್ತಿಯ ಪ್ರೀತಿ, ಬೆಕ್ಕಿನೊಂದಿಗೆ ಪ್ರೀತಿಯ ಒಡನಾಟ, ಒಟ್ಟಾರೆ ಕೆಲವು ಪ್ರಾಣಿ ಪಕ್ಷಿಗಳೆಂದರೆ ನನಗೆ ಬಲು ಇಷ್ಟವಾಗಿದ್ದು, ನಾನು 2015ರ ಸಮಯದಲ್ಲಿ ಕೆಲವು ಕಷ್ಟದ ದಿನಗಳಿಂದ ನೆಮ್ಮದಿ ಪಡೆದು ಮನೆಗೆ ಬಂದಾಗ ಪ್ರೀತಿಯಿಂದ ನಾಯಿ ಮರಿಯೊಂದನ್ನು ಸಾಕಿದ್ದು, ಅದರೊಂದಿಗೆ ಬಲು ಪ್ರೀತಿಯಿಂದ ಕಾಲ ಕಳೆಯುತ್ತಿದ್ದೇನೆ.
ಅದಕ್ಕೆ “ರಾಖಿ” ಎಂದು ನಾಮಕರಣವು ಮಾಡಿದ್ದು, ಎಷ್ಟು ನಂಬಿಕೆ ವಿಶ್ವಾಸ, ಇಂತಹ ಪ್ರೀತಿಯ ಪ್ರಾಣಿಯನ್ನು ಅದೇಕೇ ಮೂಖನಾಗಿಸಿದೆ ಭಗವಂತ ಎಂತೆಲ್ಲಾ ಯೋಚಿಸುತ್ತಿರುವಾಗಲೇ ಚಾರ್ಲಿ 777 ಚಿತ್ರದ ಮೂಲಕ ನಾಯಕ ರಕ್ಷಿತ್ ಶೆಟ್ಟಿ ಅವರು ಶ್ವಾನದ ಪ್ರೀತಿ, ವಿಶ್ವಾಸ, ನಂಬಿಕೆ ಇದೆಲ್ಲದರ ಬಗ್ಗೆ ಜಗತ್ತಿಗೆ ಸಾರಿ ತೋರಿಸಿದ್ದಾರೆ.
ಚಾರ್ಲಿ 777 ಸಿನಿಮಾವನ್ನು ನಾನು ಮತ್ತು ನನ್ನ ಕುಟುಂಬದ ಸದಸ್ಯರು ನೋಡುತ್ತಿದ್ದ ಸಂದರ್ಭದಲ್ಲಿ ನನ್ನ ನೆಚ್ಚಿನ ರಾಖಿಯು ನನ್ನ ಪಕ್ಕದಲ್ಲಿ ಕುಳಿತು ಚಿತ್ರವನ್ನು ನೋಡುತ್ತಿತ್ತು. ಚಿತ್ರದಲ್ಲಿ ಚಾರ್ಲಿಯನ್ನು ಕಂಡಾಗಲೆಲ್ಲಾ ನಮ್ಮ ರಾಖಿಯ ಕಿವಿ ಅರಳಿ ನಿಲ್ಲುತ್ತಿದ್ದು, ಅದರ ಪ್ರೀತಿ ಮಮಕಾರ ನನಗೆ ಅರ್ಥವಾಗುತ್ತಿತ್ತು.
ಮನಸ್ಸು ಕರಗಿಸುವ ಚಾರ್ಲಿಯ ನಟನೆ ಶ್ಲಾಘನೀಯ, ನಾಯಕ Rakshit Shetty ಅವರ ಅದ್ಭುತವಾದ ನಟನೆ, ಚಿತ್ರಕಥೆ ಹಾಗೂ ಮೊದಲ ಸಿನಿಮಾದಲ್ಲೇ ಇಂತಹ ಒಳ್ಳೆ ಚಿತ್ರವನ್ನು ನಿರ್ದೇಶಸಿರುವ Kiranraj K ರವರಿಗೆ, ಚಿತ್ರದಲ್ಲಿ ತಮ್ಮ ಸಹಜವಾದ ನಟನೆಯಿಂದಲೇ ಎಲ್ಲರನ್ನೂ ನಕ್ಕು ನಗಿಸುವ Raj B Shetty ಅವರು ಹಾಗೂ ಇಂತಹ ಒಳ್ಳೆ ಚಿತ್ರಕ್ಕೆ ಶ್ರಮಿಸಿದ ಚಿತ್ರ ತಂಡದ ಎಲ್ಲರಿಗೂ ನನ್ನ ಹೃದಯ ಪೂರ್ವಕ ಅಭಿನಂದನೆಗಳು ಎಂದು ಬರೆದುಕೊಂಡಿದ್ದಾರೆ.
ವಿಡಿಯೋ ನೋಡಲು ಲಿಂಕ್ ಮೇಲೆ ಕ್ಲಿಕ್ ಮಾಡಿ
https://www.facebook.com/100044312325311/posts/590691519084587/?app=fbl