ಎಲ್ಲಾ ಸಿಎನ್‌ಜಿ ವಾಹನ ಮಾಲೀಕರಿಗೆ ಸುರಕ್ಷತೆಯ ದೃಷ್ಟಿಯಿಂದ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದ್ದು, ಮಾಲೀಕರು ತಮ್ಮ ವಾಹನಗಳ ಸಿಲಿಂಡರ್‌ಗಳಿಗೆ ಕಡ್ಡಾಯ ಸುರಕ್ಷತಾ ಪರೀಕ್ಷೆಗಳನ್ನು ಮಾಡಿಸಬೇಕು ಎಂದು ಸಾರಿಗೆ ಇಲಾಖೆ ಸುತ್ತೋಲೆ ಪ್ರಕಟಿಸಿದೆ.
ಹೌದು, ಸಾರಿಗೆ ಇಲಾಖೆ ಹೊರಡಿಸಿರುವ ಈ ಸುತ್ತೋಲೆಯು ಸಿಎನ್‌ಜಿ ವಾಹನಗಳಿಗೆ ಕೇಂದ್ರ ಸರ್ಕಾರ ಹೊರಡಿಸಿದ ರಾಷ್ಟ್ರೀಯ ಮಾರ್ಗಸೂಚಿಗಳ ಅನುಗುಣವಾಗಿದೆ. 3 ವರ್ಷಗಳಿಗೊಮ್ಮೆ ಸಿಲಿಂಡರ್‌ಗೆ ʻಹೈಡ್ರೋಸ್ಟಾಟಿಕ್ ಸ್ಟ್ರೆಚ್ʼ ಪರೀಕ್ಷೆ ನಡೆಸುವುದು ಕಡ್ಡಾಯ ಎಂದು ಸರ್ಕಾರ ಹೇಳಿದೆ.
ಏನಿದು ಹೈಡ್ರೋಸ್ಟಾಟಿಕ್ ಸ್ಟ್ರೆಚ್?
ವಾಹನಗಳಿಗೆ ಸಿಎನ್‌ಜಿ ಇಂಧನ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿದ್ದು, ಸಿಎನ್‌ಜಿ ಸಿಲಿಂಡರ್‌ಗಳನ್ನು ಕಾಲಕಾಲಕ್ಕೆ ಪರಿಶೀಲಿಸದಿದ್ದರೆ ಸೋರಿಕೆಯಾಗಿ ಅವಘಡಗಳು ಸಂಭವಿಸುವ ಸಾಧ್ಯತೆಯಿರುತ್ತದೆ. ಆದ್ದರಿಂದ ಸರ್ಕಾರ ಹೈಡ್ರೋಸ್ಟಾಟಿಕ್ ಸ್ಟ್ರೆಚ್ ಪರೀಕ್ಷೆ ಕಡ್ಡಾಯಗೊಳಿಸಿದೆ.
ಈ ಪರೀಕ್ಷೆಯಲ್ಲಿ ನೀರು ಅಥವಾ ಬೇರೊಂದು ದ್ರಾವಣವನ್ನು ಸಿಲಿಂಡರ್‌ಗೆ ತುಂಬಲಾಗುತ್ತದೆ. ಆಗ ಸಿಲಿಂಡರ್ ಸೋರಿಕೆಯಾಗುತ್ತಿದೆಯೋ, ಇಲ್ಲವೋ ಎಂಬುದು ತಿಳಿಯುತ್ತದೆ. ಆಗ ಬೇಕಿದ್ದರೆ ಸಿಲಿಂಡರ್ ಬದಲಾಯಿಸಬಹುದು.