ಕೊಪ್ಪಳ : ಬಿ ಎಸ್ ಯಡಿಯೂರಪ್ಪ ಅವರು ಇನ್ನು ಬಹಳ ದಿನ ಸಿಎಂ ಆಗಿ ಉಳಿಯುವುದಿಲ್ಲ ಎಂಬ ಯತ್ನಾಳ್ ಹೇಳಿಕೆಗೆ ಸಂಬಂಧಿಸಿದಂತೆ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಕಾರಣ ನೀಡದೇ ಪಕ್ಷದಿಂದ ಉಚ್ಛಾಟಿಸಬೇಕೆಂದು ಸಚಿವ ಕೆ ಎಸ್ ಈಶ್ವರಪ್ಪ ಅವರು ಹೇಳಿದ್ದಾರೆ.
ಕೊಪ್ಪಳದಲ್ಲಿಂದು ಶಾಸಕ ಕೆ ಎಸ್ ಈಶ್ವರಪ್ಪ ಅವರು ಮಾತನಾಡಿ, ಕೆಲವರು ಬಾಯಿ ಚಪಲಕ್ಕೆ ಮೂರ್ಖತನದ ಹೇಳಿಕೆ ನೀಡುತ್ತಾರೆ. ಇತ್ತೀಚಿನ ಶಾಸಕಾಂಗ ಸಭೆಯಲ್ಲಿ ಎಲ್ಲ ಶಾಸಕರಿಗೂ ಸಿಎಂ ನಿಮ್ಮ ಕ್ಷೇತ್ರದ ಸಮಸ್ಯೆ ಏನೆಂದು ಕೇಳಿ, ಬಗೆಹರಿಸಿಕೊಳ್ಳುವಂತೆ ಹೇಳಿದ್ದರು. ಆ ಸಭೆಯಲ್ಲಿ ಬಾಯಿ ಮಚ್ಚಿ ಕುಳಿತು, ಉತ್ತರನ ಪೌರುಷದಂತೆ ಹೊರ ಬಂದು ಕೆಲವರು ಹೇಳಿಕೆ ನೀಡಿದ್ದಾರೆಂದು ಯತ್ನಾಳ್‍ಗೆ ಶಾಸಕ ಈಶ್ವರಪ್ಪ ಅವರು ಟಾಂಗ್ ನೀಡಿದ್ದಾರೆ.
ಯತ್ನಾಳ್ ಹೇಳಿಕೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಸಂತೋಷವಾಗಿರಬಹುದು. ಬಿಜೆಪಿ ಸರ್ಕಾರ ಪತನವಾದರೆ ಅದಕ್ಕೆ ನಾನು ಕಾರಣ ಅಲ್ಲ ಎಂದು ಸಿದ್ದರಾಮಯ್ಯ ಅವರು ಹೇಳುತ್ತಾರೆ. ಮತ್ತೆ ಸಮ್ಮಿಶ್ರ ಸರ್ಕಾರವನ್ನು ಕೆಡವಿದ್ದು ಸಿದ್ದರಾಮಯ್ಯ ಅವರು ಎಂದು ಕುಮಾರಸ್ವಾಮಿ ಅವರು ಹೇಳುತ್ತಾರೆ. ಸ್ವರ್ಗದಲ್ಲಿರೋ ಇಂದಿರಾಗಾಂಧಿ, ರಾಜೀವ್ ಗಾಂಧಿ ಬಂದರು ಬಿಜೆಪಿ ಸರ್ಕಾರ ಬೀಳಿಸಲು ಸಾಧ್ಯವಿಲ್ಲ ಎಂದು ಶಾಸಕ ಕೆ ಎಸ್ ಈಶ್ವರಪ್ಪ ಅವರು ಹೇಳಿದ್ದಾರೆ.