IPL retention 2026: IPL 2026ರ ಮಿನಿ ಹರಾಜಿಗೂ ಮುನ್ನ RCB ತಂಡ ಕೆಲವು ಆಟಗಾರರನ್ನು ರಿಲೀಸ್ ಮಾಡಲು ನಿರ್ಧರಿಸಿದೆ.
ಹೌದು, ಈ ರಿಲೀಸ್ ಪಟ್ಟಿಯಲ್ಲಿ ಇಂಗ್ಲೆಂಡ್ನ ಸ್ಟಾರ್ ಆಲ್ರೌಂಡರ್ನ ಹೆಸರು ಮುಂಚೂಣಿಯಲ್ಲಿದ್ದು, ಫ್ರಾಂಚೈಸಿ ಲಿಯಾಮ್ ಲಿವಿಂಗ್ಸ್ಟೋನ್ ಅವರನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ. ಕಳೆದ ಸೀಸನ್ನಲ್ಲಿ ಕಳಪೆ ಪ್ರದರ್ಶನ ನೀಡಿರುವ ಕಾರಣ ಲಿವಿಂಗ್ಸ್ಟೋನ್ ಅವರನ್ನು ತಂಡದಿಂದ ರಿಲೀಸ್ ಮಾಡಲು ನಿರ್ಧರಿಸಲಾಗಿದೆ ಎಂದು RCB ಮೂಲಗಳು ತಿಳಿಸಿವೆ.
ಲಿವಿಂಗ್ಸ್ಟೋನ್ ಅವರ ಬಿಡುಗಡೆಯಿಂದಾಗಿ ಆರ್ಸಿಬಿ ತಂಡದ ಪರ್ಸ್ ಮೊತ್ತಕ್ಕೆ 8.75 ಕೋಟಿ ರೂ. ಸೇರ್ಪಡೆಯಾಗಲಿದೆ. ಇನ್ನು, ಲಿವಿಂಗ್ಸ್ಟೋನ್ ಜೊತೆಗೆ ರಸಿಕ್ ಸಲಾಂ ದಾರ್, ಮಾಯಾಂಕ್ ಅಗರ್ವಾಲ್ ಸೇರಿದಂತೆ ಇನ್ನು ಕೆಲವರನ್ನು ಕೈಬಿಡುವ ಸಾಧ್ಯತೆಯಿದೆ ಎನ್ನಲಾಗಿದೆ.




