ಬ್ರಿಸ್ಬೇನ್: ಆಸ್ಟ್ರೇಲಿಯಾ ವಿರುದ್ಧ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 3 ವಿಕೆಟ್ ಗಳ ರೋಚಕ ಐತಿಹಾಸಿಕ ಗೆಲುವು ಸಾಧಿಸಿ ಮೂಲಕ, 2-1 ಅಂತರದಲ್ಲಿ ಬಾರ್ಡರ್ ಗವಾಸ್ಕರ್ ಸರಣಿಯನ್ನು ಟೀಮ್ ಇಂಡಿಯಾ ವಶಪಡಿಸಿಕೊಂಡಿದೆ.
328 ರನ್ ಗಳ ಗೆಲುವಿನ ಗುರಿ ಬೆನ್ನಟ್ಟಿ, 2 ನೇ ಇನ್ನಿಂಗ್ಸ್ ನಲ್ಲಿ 4 ರನ್ ಗಳಿಸಿ ಇವತ್ತಿನ ದಿನದಾಟ ಆರಂಭಿಸಿದ ಟೀಮ್ ಇಂಡಿಯಾ, 7 ವಿಕೆಟ್ ಕಳೆದುಕೊಂಡು 329 ರನ್ ಗಳಿಸಿ 3 ವಿಕೆಟ್ ಗಳ ಗೆಲುವು ಸಾಧಿಸಿತು. ಟೀಮ್ ಇಂಡಿಯಾ 2 ನೇ ಇನ್ನಿಂಗ್ಸ್ ನಲ್ಲಿ ರಿಷಬ್ ಪಂಥ್ ಅಜೇಯ್ 89, ಗಿಲ್ 91, ಚೇತೇಶ್ವರ್ ಪೂಜಾರಾ 56, ವಾಷಿಂಗ್ಟನ್ ಸುಂದರ್ 22, ಅಜೀಂಕ್ಯ ರೆಹಾನೆ 24 ರನ್ ಗಳಿಸಿದರು. ಆಸ್ಟ್ರೇಲಿಯಾ ತಂಡದ ಪರ ಪ್ಯಾಟ್ ಕಮಿನ್ಸ್ 4 ವಿಕೆಟ್, ನಾಥನ್ ಲಿಯಾನ್ 2 ವಿಕೆಟ್ ಹಾಗು ಹೆಜೆಲ್ ವುಡ್ 1 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು.
ಅಜೇಯ 89 ರನ್ ಗಳಿಸಿ ಟೀಮ್ ಇಂಡಿಯಾ ಗೆಲುವಿಗೆ ಪ್ರಮುಖ ಪಾತ್ರವಹಿಸಿದ ರಿಷಬ್ ಪಂತ್ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು. ಇನ್ನು ನಾಲ್ಕು ಟೆಸ್ಟ್ ಪಂದ್ಯಗಳಿಂದ ಅಮೋಘ ಪ್ರದರ್ಶನ ನೀಡಿದ ಆಸ್ಟ್ರೇಲಿಯಾದ ಬೌಲರ್ ಪ್ಯಾಟ್ ಕಮ್ಮಿನ್ಸ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.