IND vs BAN: ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂ ನಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಎರಡನೇ T20ಯಲ್ಲಿ ಭಾರತ 86 ರನ್ ಗಳ ಭರ್ಜರಿ ಗೆಲುವು ಸಾಧಿಸಿದೆ.
ಹೌದು, ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಇಂಡಿಯಾ ನಿತೀಶ್, ರಿಂಕು ಬ್ಯಾಟಿಂಗ್ ಅಬ್ಬರದಿಂದ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 221 ರನ್ ಗಳ ಬೃಹತ್ ಮೊತ್ತ ಗಳಿಸಿತು.
ಆರಂಭದಲ್ಲಿ ಕಡಿಮೆ ಸ್ಕೋರ್‌ಗೆ 3 ವಿಕೆಟ್ ಕಳೆದುಕೊಂಡರೂ ನಿತೀಶ್ ಕುಮಾರ್ ರೆಡ್ಡಿ (74) ಹಾಗೂ ರಿಂಕು ಸಿಂಗ್ (53) ಅರ್ಧಶತಕ ಸಿಡಿಸಿ ಮಿಂಚಿದರು. ಇಬ್ಬರೂ ಉತ್ತಮವಾಗಿ ಆಡಿದರು. ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ (32) ಆಕ್ರಮಣಕಾರಿ ಆಟವಾಡಿದರು. ಬಾಂಗ್ಲಾ ಪರ ಹೊಸೈನ್ 3, ತಸ್ಕಿನ್ ಅಹ್ಮದ್, ಹಸನ್ ಸಾಕಿಬ್ & ಮುಸ್ತಾಫಿಜುರ್ ತಲಾ ಎರಡು ವಿಕೆಟ್ ಪಡೆದರು.
ಇನ್ನು, ಟೀಮ್ ಇಂಡಿಯಾ ನೀಡಿದ 222 ರನ್ ಗಳ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 135 ರನ್ ಗಳಿಸಿ 86 ರನ್ ಗಳ ಅಂತರದಿಂದ ಸೋಲು ಕಂಡಿತು. ಬಾಂಗ್ಲಾ ಪರ ಎಮೋನ್ 16, ಲಿಟನ್ ದಾಸ್ 14, ಮೆಹಂದಿ ಹಸನ್ ಮಿರಾಜ್ 16, ಮಹಾಮದುಲ್ಲಾ 41 ರನ್ ಗಳಿಸಿದರು. ಟೀಮ್ ಇಂಡಿಯಾ ಪರ ವರುಣ್ ಚಕ್ರವರ್ತಿ 2, ನಿತೀಶ್ ರೆಡ್ಡಿ 2, ಅರ್ಶ್ ಡೀಪ್ ಸಿಂಗ್ , ಸುಂದರ್, ಅಭಿಷೇಕ್ ಶರ್ಮ, ಮಾಯಾಂಕ್ ಯಾದವ್ ಹಾಗೂ ರಿಯನ್ ಪರಾಗ್ ತಲಾ 1 ವಿಕೆಟ್ ಪಡೆದು ತಂಡದ ಗೆಲುವಿಗೆ ಕಾರಣರಾದರೂ.