ದಾವಣಗೆರೆ: 2022 -23ನೇ ಸಾಲಿನಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿಯಾದ ವಿಚಾರಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ದರದಲ್ಲಿ ಪರಿಹಾರ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಹೌದು, ಮಳೆಯಾಶ್ರಿತ ಬೆಳೆಹಾನಿಗೆ ಪ್ರತಿ ಹೆಕ್ಟೇರ್ ಗೆ ಮಾರ್ಗಸೂಚಿ ದರ 6, 800 ರೂ., ಹೆಚ್ಚುವರಿ ದರ 6, 800 ಸೇರಿ ಪರಿಷ್ಕೃತ ದರ 13, 600 ರೂಪಾಯಿ ನೀಡಲಾಗುವುದು. ನೀರಾವರಿ ಬೆಳೆ ಪ್ರತಿ ಹೆಕ್ಟೇರ್ ಗೆ ಮಾರ್ಗಸೂಚಿ ದರ 13, 500 ರೂಪಾಯಿ, ಹೆಚ್ಚುವರಿ ದರ 11, 500 ರೂ. ಸೇರಿ ಪರಿಷ್ಕೃತ ದರ 25, 000 ರೂ. ನೀಡಲಾಗುತ್ತದೆ.
ಇನ್ನು, ಬಹು ವಾರ್ಷಿಕ ಬೆಳೆ ಪ್ರತಿ ಹೆಕ್ಟರ್ ಗೆ ಮಾರ್ಗಸೂಚಿ ದರ 18 ಸಾವಿರ ರೂಪಾಯಿ ಇದ್ದು ಹೆಚ್ಚುವರಿ 10, 000 ರೂ. ಸೇರಿ ಪರಿಷ್ಕೃತ ತ ದರ 28, 000 ರೂ. ನೀಡಲಾಗುವುದು. ಪ್ರತಿ ಎರಡು ಹೆಕ್ಟೇರ್ ಗೆ ಸೀಮಿತಗೊಳಿಸಿ ಇನ್ಸುಟ್ ಸಬ್ಸಿಡಿ ಪಾವತಿಗೆ ರಾಜ್ಯ ಸರ್ಕಾರದಿಂದ ಮಂಜೂರಾತಿ ಆದೇಶ ನೀಡಲಾಗಿದೆ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿದೆ.