ವೈಯಕ್ತಿಯ ಆದಾಯ ತೆರಿಗೆಯಲ್ಲಿ ಬಜೆಟ್‌ನಲ್ಲಿ ಭಾರೀ ಇಳಿಕೆ ಮಾಡಲಾಗಿದ್ದು,. 5 ಲಕ್ಷ ಮಿತಿ ವಿನಾಯಿತಿಯನ್ನು 7 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ಏಳು ಲಕ್ಷ ಆದಾಯದವರೆಗೆ ಯಾವುದೇ ತೆರಿಗೆ ಇಲ್ಲ ಎಂದು ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಮಧ್ಯಮ ವರ್ಗವನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.
ಬಜೆಟ್: ಯಾರಿಗೆ ಎಷ್ಟು ವಿನಾಯಿತಿ?
ಕೇಂದ್ರ ವಿತ್ತ ಸಚಿವ ನಿರ್ಮಲಾ ಹೊಸ ತೆರಿಗೆ ಪದ್ಧತಿಯಲ್ಲಿ 7 ಲಕ್ಷದವರೆಗೆ ತೆರಿಗೆ ವಿನಾಯಿತಿ ಘೋಷಣೆ ಮಾಡಿದ್ದಾರೆ. ಹೊಸ ತೆರಿಗೆ ಪದ್ದತಿ ಜಾರಿ ಮಾಡಿದ್ದು, 3 ಲಕ್ಷದ ವರೆಗೆ ಯಾವುದೇ ತೆರಿಗೆ ಪಾವತಿಸುವ ಅಗತ್ಯವಿಲ್ಲ. ಮಧ್ಯಮ ವರ್ಗಕ್ಕೆ ಅನುಕೂಲವಾಗುವಂತೆ ವೈಯಕ್ತಿಕ ಆದಾಯ ತೆರಿಗೆ ಜಾರಿ.
*3 ರಿಂದ 6 ಲಕ್ಷದವರೆಗೆ 5 ಶೇ ತೆರಿಗೆ ವಿನಾಯಿತಿ.
*6 ರಿಂದ 9 ಲಕ್ಷದವರೆಗೆ 10 ಶೇ. ತೆರಿಗೆ ವಿನಾಯಿತಿ.
*9 ರಿಂದ 12 ಲಕ್ಷದವರೆಗೆ ಶೇ.15ರಷ್ಟು ತೆರಿಗೆ ವಿನಾಯಿತಿ.
*12 ರಿಂದ15 ಲಕ್ಷದವರೆಗಿನವರಿಗೆ ಶೇ.20ರಷ್ಟು ತೆರಿಗೆ.