ಮಹತ್ವದ ನಿರ್ಧಾರ : ನವೆಂಬರ್ 17 ರಂದು ಕಾಲೇಜುಗಳ ಆರಂಭ!

ಬೆಂಗಳೂರು: ನವೆಂಬರ್ 17 ರಂದು ಕಾಲೇಜುಗಳ ಆರಂಭಕ್ಕೆ ನಿರ್ಧರಿಸಲಾಗಿದೆ ಎಂದು ಡಿಸಿಎಂ ಅಶ್ವಥ್ ನಾರಾಯಣ್ ಅವರು ಹೇಳಿದ್ದಾರೆ. ಈ ಕುರಿತು ಡಿಸಿಎಂ ಅಶ್ವಥ್ ನಾರಾಯಣ್ ಅವರು ಟ್ವೀಟ್ ಮಾಡಿದ್ದೂ, ನವೆಂಬರ್ 17 ರಂದು ಕಾಲೇಜುಗಳ…

college vijayaprabha news

ಬೆಂಗಳೂರು: ನವೆಂಬರ್ 17 ರಂದು ಕಾಲೇಜುಗಳ ಆರಂಭಕ್ಕೆ ನಿರ್ಧರಿಸಲಾಗಿದೆ ಎಂದು ಡಿಸಿಎಂ ಅಶ್ವಥ್ ನಾರಾಯಣ್ ಅವರು ಹೇಳಿದ್ದಾರೆ.

ಈ ಕುರಿತು ಡಿಸಿಎಂ ಅಶ್ವಥ್ ನಾರಾಯಣ್ ಅವರು ಟ್ವೀಟ್ ಮಾಡಿದ್ದೂ, ನವೆಂಬರ್ 17 ರಂದು ಕಾಲೇಜುಗಳ ಆರಂಭಕ್ಕೆ ನಿರ್ಧರಿಸಲಾಗಿದೆ. ಮಾನ್ಯ ಮುಖ್ಯಮಂತ್ರಿ ಬಿ.ಎಸ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಕಾಲೇಜು ಆರಂಭದ ಬಗ್ಗೆ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.ಪದವಿ, ಇಂಜಿನಿಯರಿಂಗ್, ಸ್ನಾತಕೋತ್ತರ ಹಾಗೂ ಡಿಪ್ಲೋಮ ಕಾಲೇಜುಗಳ ಪುನರಾರಂಭ ಕುರಿತು ಎಲ್ಲ ಇಲಾಖೆಗಳ ಜತೆ ಚರ್ಚಿಸಲಾಗಿದೆ.

ತರಗತಿಗಳಿಗೆ ಹಾಜರಾಗಲು ಎಲ್ಲ ವಿದ್ಯಾರ್ಥಿಗಳಿಗೆ ಆಯ್ಕೆ ಇರಲಿದೆ. ಆನ್ಲೈನ್ ಹಾಗೂ ಕ್ಲಾಸ್ ರೂಂ ತರಗತಿಗಳು ಸಂಯೋಜಿತವಾಗಿ ಇರಲಿದ್ದು, ಕ್ಲಾಸ್ ರೂಂಗೆ ಬರಬೇಕಾದರೆ ಪೋಷಕರಿಂದ ಪರವಾನಗಿ ಪತ್ರ ತರಬೇಕು. ಪ್ರಾಕ್ಟಿಕಲ್ ತರಗತಿಗಳ ಆರಂಭಕ್ಕೆ ಮೊದಲ ಆದ್ಯತೆ ನೀಡಲಾಗುವುದು.

Vijayaprabha Mobile App free

UGC ಯ ಕರೋನ ಮಾರ್ಗಸೂಚಿಯ ಅನುಗುಣವಾಗಿ ಎಲ್ಲಾ ಸುರಕ್ಷಾ ಕ್ರಮಗಳನ್ನು ಅನುಸರಿಸಲಾಗುವುದು. ಎಲ್ಲಾ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಟಾಸ್ಕ್ ಫೋರ್ಸ್ ಹಾಗೂ ಪ್ರತಿ ಕಾಲೇಜಿನಲ್ಲಿ ಇದಕ್ಕಾಗಿ ಟಾಸ್ಕ್ ಫೋರ್ಸ್ ರಚಿಸಲಾಗುವುದು ಎಂದು ಡಿಸಿಎಂ ಅಶ್ವಥ್ ನಾರಾಯಣ್ ಅವರು ಹೇಳಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.