Voter ID mapping | ವೋಟರ್ ಐಡಿ ‘ಮ್ಯಾಪಿಂಗ್’ ಮಾಡಿಸಿಕೊಳ್ಳದಿದ್ದರೆ ಮತದಾನದ ಹಕ್ಕು ಇಲ್ಲ?

Voter ID mapping | ಭಾರತ ಚುನಾವಣಾ ಆಯೋಗವು ಮತದಾನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರಲು ಮಹತ್ವದ ಹೆಜ್ಜೆ ಇಟ್ಟಿದೆ. 2002ರ ಮತದಾರರ ಪಟ್ಟಿಯನ್ನು ಪ್ರಸ್ತುತ 2025ರ ಪರಿಷ್ಕೃತ ಮತದಾರರ ಪಟ್ಟಿಗೆ ಮ್ಯಾಪಿಂಗ್ ಮಾಡುವ ಕಾರ್ಯವು…

Voter ID mapping

Voter ID mapping | ಭಾರತ ಚುನಾವಣಾ ಆಯೋಗವು ಮತದಾನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರಲು ಮಹತ್ವದ ಹೆಜ್ಜೆ ಇಟ್ಟಿದೆ. 2002ರ ಮತದಾರರ ಪಟ್ಟಿಯನ್ನು ಪ್ರಸ್ತುತ 2025ರ ಪರಿಷ್ಕೃತ ಮತದಾರರ ಪಟ್ಟಿಗೆ ಮ್ಯಾಪಿಂಗ್ ಮಾಡುವ ಕಾರ್ಯವು ರಾಜ್ಯಾದ್ಯಂತ ಭರದಿಂದ ಸಾಗುತ್ತಿದೆ. ನಿಮ್ಮ ಮತದಾನದ ಹಕ್ಕನ್ನು ಉಳಿಸಿಕೊಳ್ಳಲು ಮತ್ತು ಪಟ್ಟಿಯಲ್ಲಿ ನಿಮ್ಮ ಹೆಸರು ಸರಿಯಾಗಿ ಇರಲು ಕೆಲವೊ೦ದು ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ.

ಈ ವರ್ಗದವರು ಮಾಹಿತಿ ಅಷ್ಟೇಟ್ ಮಾಡಬೇಕು

2002ರ ನಂತರ ಕೆಲಸ ಅಥವಾ ವೈಯಕ್ತಿಕ ಕಾರಣಗಳಿಗಾಗಿ ಒಂದು ವಿಧಾನಸಭಾ ಕ್ಷೇತ್ರದಿಂದ ಮತ್ತೊಂದು ಕ್ಷೇತ್ರಕ್ಕೆ ವಲಸೆ ಹೋದವರು, ಮದುವೆಯ ನ೦ತರ ಬೇರೆ ಊರಿಗೆ ತೆರಳಿ ಮತದಾರರ ಪಟ್ಟಿಗೆ ಹೆಸರು ಸೇರಿಸಿದ ವಿವಾಹಿತ ಮಹಿಳೆಯರು, ಇತ್ತೀಚೆಗೆ ಮತದಾನದ ಅರ್ಹತೆ ಪಡೆದು ಪಟ್ಟಿಗೆ ಸೇರಿದ ಹೊಸ ಮತದಾರರು, ಹಾಗೂ ಒಂದೇ ಕ್ಷೇತ್ರದ ವ್ಯಾಪ್ತಿಯಲ್ಲಿ ಮನೆ ಬದಲಾಯಿಸಿದ ಸ್ಥಳಾಂತರಗೊಂಡವರು ತಮ್ಮ ಮಾಹಿತಿಯನ್ನು ತಪ್ಪದೇ ಅಪ್ಲೇಟ್ ಮಾಡಬೇಕು.

ಹಳೆಯ ವಿವರಗಳು ಕಡ್ಡಾಯ

ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಗಾಗಿ ಮತದಾರರು ತಮ್ಮ ಹಳೆಯ ವಿವರಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು. ಇದರಲ್ಲಿ ನೀವು ಈ ಹಿಂದೆ ವಾಸವಿದ್ದ ವಿಧಾನಸಭಾ ಕ್ಷೇತ್ರದ ಸಂಖ್ಯೆ, ಹಳೆಯ ಮತದಾರರ ಪಟ್ಟಿಯ ಭಾಗ ಸಂಖ್ಯೆ (Part Number) ಮತ್ತು ನಿಮ್ಮ ಹಳೆಯ ಕ್ರಮ ಸಂಖ್ಯೆ (Serial Number) ಸೇರಿವೆ. ಈ ಮಾಹಿತಿಯು ಮತದಾರರ ಪಟ್ಟಿಯನ್ನು ನವೀಕರಿಸಲು ಸಹಾಯಕವಾಗಲಿದೆ.

Vijayaprabha Mobile App free

ಪಟ್ಟಿಯಲ್ಲಿ ಹೆಸರಿಲ್ಲದಿದ್ದರೆ ಹೀಗೆ ಮಾಡಿ

2002ರ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ನೇರವಾಗಿ ಲಭ್ಯವಿಲ್ಲದಿದ್ದರೆ ಚಿಂತಿಸಬೇಡಿ. ನಿಮ್ಮ ತಂದೆ ಅಥವಾ ತಾಯಿಯವರ ಹಳೆಯ ಕ್ರಮ ಸಂಖ್ಯೆಯನ್ನು ನೀಡುವ ಮೂಲಕ, ಅಥವಾ ಅಜ್ಜ /ಅಜ್ಜಿಯವರ ಹೆಸರಿನಲ್ಲಿದ್ದ ಮತದಾರರ ಪಟ್ಟಿಯ ಮಾಹಿತಿಯನ್ನು ಒದಗಿಸುವ ಮೂಲಕ ನಿಮ್ಮ ಹೆಸರನ್ನು ಸೇರಿಸಲು ಪರ್ಯಾಯ ಮಾರ್ಗಗಳಿವೆ. ಸ೦ಬ೦ಧಿಸಿದ ದಾಖಲೆಗಳನ್ನು ಒದಗಿಸಿ ನಿಮ್ಮ ಮತದಾರರ ಹಕ್ಕನ್ನು ಚಲಾಯಿಸಲು ಅವಕಾಶವಿದೆ.

ಬಿಎಲ್‌ಒ ಭೇಟಿ ಅನಿವಾರ್ಯ

ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಖಚಿತಪಡಿಸಿಕೊಳ್ಳಲು ಮತ್ತು ಮತದಾನದ ಹಕ್ಕನ್ನು ಭದ್ರಪಡಿಸಿಕೊಳ್ಳಲು, ನಾಗರಿಕರು ತಮ್ಮ ವ್ಯಾಪ್ತಿಯ ಬೂತ್‌ ಮಟ್ಟದ ಅಧಿಕಾರಿಗಳನ್ನು (BLO) ತಕ್ಷಣವೇ ಭೇಟಿ ಮಾಡಬೇಕು. ಅಗತ್ಯ ದಾಖಲೆಗಳನ್ನು ಸಲ್ಲಿಸಿ, ಬಿಎಲ್‌ಒ ಮೂಲಕ ಹೆಸರು ಮ್ಯಾಪಿಂಗ್ ಮಾಡಿಸಿಕೊಳ್ಳಬೇಕು. ಬಿಎಲ್‌ಒಗಳು ಮನೆಗೆ ಬರದಿದ್ದರೆ, ನಿಮ್ಮ ಪ್ರದೇಶದ ಸರ್ಕಾರಿ ಶಾಲೆಯ ಶಿಕ್ಷಕರನ್ನು (ಅವರೇ ಬಿಎಲ್‌ಒ ಆಗಿದ್ದರೆ) ಸಂಪರ್ಕಿಸಿ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.

Leave a Reply