ನವದೆಹಲಿ: ಬಜೆಟ್‌ನಲ್ಲಿ ಮೊಬೈಲ್ ಫೋನ್ ಮತ್ತು ಚಾರ್ಜರ್‌ಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಹೆಚ್ಚಿಸಲಾಗಿದ್ದು, ದರಗಳು ಏರಿಕೆಯಾಗಿವೆ. ಚಾರ್ಜರ್‌ಗಳ ಮೇಲಿನ ಸುಂಕವನ್ನು ಶೇ. 15 ರಿಂದ 30ಕ್ಕೆ ಹೆಚ್ಚಿಸಲಾಗಿದ್ದು, ಕಂಪನಿಗಳು ಚಾರ್ಜರ್‌ಗಳಿಲ್ಲದೆ ಮೊಬೈಲ್‌ಗಳನ್ನು ಮಾರಾಟ ಮಾಡಲಿವೆ ಎಂದು ಹೇಳಲಾಗುತ್ತಿದೆ.
ಈಗಾಗಲೇ ಹಲವಾರು ಮೊಬೈಲ್ ಕಂಪನಿಗಳು ಈ ನೀತಿಯನ್ನು ಜಾರಿಗೊಳಿಸುತ್ತಿವೆ ಎಂದು ಉದ್ಯಮ ಮೂಲಗಳು ತಿಳಿಸಿವೆ. ಸುಂಕ ಹೆಚ್ಚಳದೊಂದಿಗೆ ಮೊಬೈಲ್ ಬೆಲೆ 3 ರಿಂದ 3.5% ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ಈ ಹಿಂದೆ ಹಲವಾರು ಕಂಪನಿಗಳು ಇಯಾರ್ ಫೋನ್ ಇಲ್ಲದೆ ಮೊಬೈಲ್ ಮಾರಾಟ ಮಾಡುತ್ತಿದ್ದವು. ಈಗ ಚಾರ್ಜರ್ ಮೇಲಿನ ಸುಂಕ ಹೆಚ್ಚಳವಾದ ಹಿನ್ನಲೆ ಮೊಬೈಲ್ ಕಂಪನಿಗಳು ಚಾರ್ಜರ್ ಇಲ್ಲದೆ ಮೊಬೈಲ್ ಮಾರಾಟ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ.