ರೈತರಿಗೆ ಸಿಹಿಸುದ್ದಿಯೊಂದಿದ್ದು, ಅನ್ನದಾತರು 4 ರೂ. ಪಡೆಯುವ ಅವಕಾಶವೊಂದಿದೆ. ಕೇಂದ್ರ ಸರ್ಕಾರವು ರೈತರಿಗೋಸ್ಕರ ಪಿಎಂ ಕಿಸಾನ್ ಯೋಜನೆಯನ್ನು ಜಾರಿಗೆ ತಂದಿದ್ದು, ಇದರಲ್ಲಿ ಸೇರುವವರಿಗೆ ವರ್ಷಕ್ಕೆ 6,000 ರೂ. ಸಿಗುತ್ತದೆ. ಆದರೆ, ಇವುಗಳು ಏಕಕಾಲಕ್ಕಿಂತ ಹೆಚ್ಚಾಗಿ ಕಂತುಗಳಲ್ಲಿ ಅಂದರೆ, ಮೂರು ಕಂತುಗಳಲ್ಲಿ 2,000 ರೂಗಳನ್ನು ರೈತರ ಖಾತೆಗೆ ಜಮಾ ಮಾಡಲಾಗುತ್ತದೆ.
ಈಗಾಗಲೇ ಪಿಎಂ ಕಿಸಾನ್ ಯೋಜನೆಗೆ ಸೇರ್ಪಡೆಗೊಂಡವರು ಈ ಹಣವನ್ನು ಪಡೆಯುತ್ತಿರುತ್ತಾರೆ. ಆದರೆ, ಇನ್ನೂ ಈ ಯೋಜನೆಗೆ ಸೇರದೆ ಇರುವವರು ಇದ್ದರೆ, ಅವರು ತಕ್ಷಣ 4,000 ರೂಗಳನ್ನು ಪಡೆಯುವ ಅವಕಾಶವಿದೆ.
ಜೂನ್ 30 ರೊಳಗೆ ಪಿಎಂ ಕಿಸಾನ್ ಯೋಜನೆಗೆ ಸೇರಿದರೆ ಅವರಿಗೆ ಈ ಲಾಭ ಸಿಗುತ್ತದೆ. ಏಪ್ರಿಲ್-ಜುಲೈ ಬರುವ ಕಂತು ಜುಲೈನಲ್ಲಿ ಬರುತ್ತದೆ. ಹಾಗೆ ಆಗಸ್ಟ್ ತಿಂಗಳ ಕಂತು ಸಹ ಪಡೆಯಬಹುದು. ನೀವು ಹಿಂದೆ ಹಿಂದೆಲೇ ಎರಡು ಕಂತುಗಳ ಹಣ ಪಡೆಯಬಹುದು.
ಈಗ ನೀವು ಪಿಎಂ ಕಿಸಾನ್ ಯೋಜನೆಗೆ ಸೇರಲು ಎಲ್ಲಿಯೂ ಹೋಗಬೇಕಾಗಿಲ್ಲ. ನೀವು ಮನೆಯಿಂದ ಆನ್‌ಲೈನ್‌ನಲ್ಲಿ ಈ ಯೋಜನೆಗೆ ಸೇರಬಹುದು. ಇದಕ್ಕಾಗಿ ನೀವು ಪಿಎಂ ಕಿಸಾನ್ ವೆಬ್‌ಸೈಟ್‌ಗೆ ಹೋಗಿ, ಅಲ್ಲಿಂದ ನೀವು ಯೋಜನೆಗೆ ಸೇರಬೇಕು. ಇದಕ್ಕೆ ಬ್ಯಾಂಕ್ ಖಾತೆ, ಆಧಾರ್ ಕಾರ್ಡ್, ನೋಂದಾಯಿತ ಮೊಬೈಲ್ ಸಂಖ್ಯೆ, ಹೊಲದ ಪಹಣಿ ಅಗತ್ಯವಿದೆ.