ಬೆಂಗಳೂರು: ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಶಾಸಕರಾಗಿದ್ದಾಗ 5 ನಿಮಿಷ ಕೂಡ ಕಲಾಪಕ್ಕೆ ತಪ್ಪಿಸಿಕೊಳ್ಳುತ್ತಿರಲಿಲ್ಲ. ಇಂದಿನ ಶಾಸಕರೂ ಕೂಡ ಅಧಿವೇಶನಕ್ಕೆ ಅವರಷ್ಟೇ ಶಿಸ್ತಿನಿಂದ ಹಾಜರಾಗಬೇಕು. ಶಾಸಕರಾದವರಿಗೆ ಅದಕ್ಕಿಂತ ಕೆಲಸ ಇನ್ನೇನು ಇರುತ್ತದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ಈ ವೇಳೆ, ಕಾವೇರಿ, ಪೆನ್ನಾರ್ ನದಿಗಳ ಜೋಡಣೆಗೆ ಕೇಂದ್ರ ಸರ್ಕಾರ ತೀರ್ಮಾನಿಸಿದ್ದು, ಆದರೆ ಇದಕ್ಕೆ ಸರ್ವಪಕ್ಷಗಳ ವಿರೋಧವಿದ್ದು, ಸಮಸ್ಯೆಗಳ ಬಗ್ಗೆ ನಾಳೆ ವಿವರಿಸುತ್ತೇನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಇಬ್ರಾಹಿಂ ಪಕ್ಷ ತೊರೆದರೂ ಮನೆಗೆ ಹೋಗುವೆ:-
ಈನು, ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ನನ್ನ ಸ್ನೇಹಿತ. ಆತ ಕಾಂಗ್ರೆಸ್ ಪಕ್ಷ ತೊರೆಯಲ್ಲ ಎಂಬ ವಿಶ್ವಾಸವಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ರಾಜಕೀಯವೇ ಬೇರೆ, ವೈಯಕ್ತಿಕ ಸ್ನೇಹವೇ ಬೇರೆ. ಇಬ್ರಾಹಿಂ ಪಕ್ಷ ತೊರೆದು ಯಾವುದೇ ಪಕ್ಷದಲ್ಲಿದ್ದರೂ ನಾನು ಅವರ ಮನೆಗೆ ಹೋಗುತ್ತೇನೆ ಎಂದು ಹೇಳಿದ್ದು, ಕೋಪ ತಣ್ಣಗಾದ ನಂತರ ಅವರೊಂದಿಗೆ ಮಾತನಾಡುತ್ತೇನೆ ಎಂದಿದ್ದಾರೆ.
ಇನ್ನು, ಪರಿಷತ್ ವಿಪಕ್ಷ ನಾಯಕನ ಸ್ಥಾನ ಸಿಗದ ಹಿನ್ನೆಲೆ ಫೆಬ್ರುವರಿ 14ರಂದು ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಇಬ್ರಾಹಿಂ ಘೋಷಿಸಿದ್ದಾರೆ.