ಬೆಂಗಳೂರು : ಆರ್ಥಿಕ ಕುಸಿತ ಮತ್ತಿತರ ಕಾರಣಗಳಿಗೆ ಪ್ರತಿ ತಿಂಗಳು ಒಂದಲ್ಲ ಒಂದು ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು, ಗ್ರಾಹಕರು ಹೈರಾಣಾಗಿದ್ದಾರೆ. ಮೊಟ್ಟೆ ಪ್ರಿಯರಿಗೆ ಶಾಕ್ ಎದುರಾಗಿದ್ದು, ಇದೀಗ ಮೊಟ್ಟೆಯ ಬೆಲೆ ಶರವೇಗದಲ್ಲಿ ಏರಿಕೆಯಾಗುತ್ತಿದೆ.
ಸದ್ಯ ರಿಟೇಲ್ ಶಾಪ್‌ನಲ್ಲಿ ಒಂದು ಮೊಟ್ಟೆಗೆ 7 ರೂಪಾಯಿಗೆ ತಲುಪಿದ್ದು, ಒಂದು ಮೊಟ್ಟೆಗೆ 2 ರೂಪಾಯಿ ಹೆಚ್ಚಾಗಿದೆ. ಕೋಳಿಗಳಿಗೆ ನೀಡುವ ಆಹಾರದ ಬೆಲೆ ಏರಿಕೆಯಾದ ಪರಿಣಾಮವಾಗಿ ಮೊಟ್ಟೆಗಳು ದುಬಾರಿ ಆಗಿದೆ ಎಂದು ತಿಳಿದು ಬಂದಿದೆ.
ಹೀಗಾಗಿ, ಆಮ್ಲೆಟ್, ಎಗ್‌ಫ್ರೈಡ್ ರೈಸ್, ಬಿರಿಯಾನಿ ಸೇರಿ ಮೊಟ್ಟ ಉತ್ಪನ್ನಗಳ ಬೆಲೆ ಜಾಸ್ತಿಯಾಗಲಿದೆ. ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ಮೊಟ್ಟೆಯ ಬೆಲೆ ಭಾರೀ ಏರಿಕೆಯಾಗುತ್ತಿದೆ.