Gold price | ಕೇಂದ್ರ ಬಜೆಟ್ ಬೆನ್ನಲ್ಲೇ ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ ಕಂಡಿದ್ದು, ರಾಜ್ಯದಲ್ಲಿ ಇಂದು ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ.
ಹೌದು, ಬೆಂಗಳೂರಿನಲ್ಲಿ 24 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ ₹9,050 ಇಳಿಕೆಯಾಗಿ, ₹1,51,530ಕ್ಕೆ ತಲುಪಿದೆ. 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ ₹8,300 ಇಳಿಕೆಯಾಗಿದ್ದು, ₹1,38,900ಕ್ಕೆ ಬಂದು ನಿಂತಿದೆ. 18 ಕ್ಯಾರೆಟ್ನ 10ಗ್ರಾಂ ಚಿನ್ನದ ಬೆಲೆಯಲ್ಲಿ ₹6,790 ಇಳಿಕೆಯಾಗಿ, ₹1,13,650 ನಂತೆ ಮಾರಾಟವಾಗುತ್ತಿದೆ. ಕಳೆದ 4 ದಿನಗಳಿಂದ ಸತತವಾಗಿ ಚಿನ್ನದ ಬೆಲೆಯಲ್ಲಿ ಬಾರೀ ಇಳಿಕೆಯಾಗಿದೆ.
ಜಾಗತಿಕ ಮಾರುಕಟ್ಟೆಯ ಏರಿಳಿತ ಹಾಗೂ ಬಜೆಟ್ ಘೋಷಣೆಗಳ ಎಫೆಕ್ಟ್ನಿಂದಾಗಿ ಈ ದಿಢೀರ್ ಇಳಿಕೆ ಕಂಡುಬಂದಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.




