ಕೈಯಲ್ಲಿ ಇರುವ ಹಣವನ್ನು ಎಲ್ಲಿಯಾದರೂ ಹೂಡಿಕೆ ಮಾಡಲು ಬಯಸುವವರಿಗೆ ಸಣ್ಣ ಉಳಿತಾಯ ಯೋಜನೆ ಉತ್ತಮ ಆಯ್ಕೆಯಾಗಿದೆ. ಪೋಸ್ಟ್ ಆಫೀಸ್ ಕೂಡ ಈ ಸೇವೆಗಳನ್ನು ಗ್ರಾಹಕರಿಗೆ ನೀಡುತ್ತದೆ. ಇವುಗಳಲ್ಲಿ ಹಣವನ್ನು ಹಾಕುವುದರಿಂದ ಯಾವುದೇ ಅಪಾಯವಿಲ್ಲ. ಇದರಿಂದ ನಿರ್ದಿಷ್ಟ ಲಾಭವನ್ನು ಗಳಿಸಬಹುದು. ಯಾವುದೇ ರಿಸ್ಕ್ ಇಲ್ಲದೆ ಉತ್ತಮ ಲಾಭವನ್ನು ಪಡೆಯಲು ಬಯಸಿದರೆ ನೀವು ಪೋಸ್ಟ್ ಆಫೀಸ್ ಯೋಜನೆಗಳಲ್ಲಿ ಹಣವನ್ನು ಹಾಕಬಹುದು.
ಪೋಸ್ಟ್ ಆಫೀಸ್ ನೀಡುವ ಕೆಲವು ಯೋಜನೆಗಳಲ್ಲಿ ಮರುಕಳಿಸುವ ಠೇವಣಿ ಯೋಜನೆ (ರಿಕರಿಂಗ್ ಡೆಪಾಸಿಟ್ ಸ್ಕೀಮ್) ಒಂದಾಗಿದೆ. ಇದರಲ್ಲಿ ಹಣ ಹಾಕುವುದರಿಂದ ಉತ್ತಮ ಲಾಭ ಪಡೆಯಬಹುದು. ಪೋಸ್ಟ್ ಆಫೀಸ್ ಆರ್ಡಿ ಯೋಜನೆಯಲ್ಲಿ ನೀವು ತಿಂಗಳಿಗೆ ರೂ .100 ರಿಂದ ಠೇವಣಿ ಇಡಬಹುದು. ಇದಕ್ಕೆ ಯಾವುದೇ ಗರಿಷ್ಠ ಮಿತಿಯಿಲ್ಲ. ನೀವು ಎಷ್ಟು ಬೇಕಾದರೂ ಠೇವಣಿ ಇಡಬಹುದು.
ಸಾಮಾನ್ಯವಾಗಿ ಪೋಸ್ಟ್ ಆಫೀಸ್ ಆರ್ಡಿ ಮುಕ್ತಾಯ ಅವಧಿ 5 ವರ್ಷಗಳು. ನಿಮ್ಮ ಹಣದ ಮೇಲಿನ ಬಡ್ಡಿಯನ್ನು ಪ್ರತಿ ಮೂರು ತಿಂಗಳಿಗೊಮ್ಮೆ ನಿಮ್ಮ ಆರ್‌ಡಿ ಖಾತೆಯಲ್ಲಿ ಜಮಾ ಮಾಡಲಾಗುತ್ತದೆ. ಇಂಡಿಯಾ ಪೋಸ್ಟ್ ವೆಬ್‌ಸೈಟ್ ಪ್ರಕಾರ, ಪ್ರಸ್ತುತ ಪೋಸ್ಟ್ ಆಫೀಸ್ ಆರ್ಡಿ ಯೋಜನೆಯಲ್ಲಿ ಶೇಕಡಾ 5.8 ಬಡ್ಡಿ ಸಿಗುತ್ತದೆ. ಈ ದರ ಜುಲೈ 1, 2020 ರಿಂದ ಜಾರಿಯಾಗಿದೆ.
ಒಂದು ವೇಳೆ ಪೋಸ್ಟ್ ಆಫೀಸ್ ಮರುಕಳಿಸುವ ಠೇವಣಿ ಯೋಜನೆಯಲ್ಲಿ (ರಿಕರಿಂಗ್ ಡೆಪಾಸಿಟ್ ಸ್ಕೀಮ್) ನೀವು ತಿಂಗಳಿಗೆ ರೂ .10,000 ಹೂಡಿಕೆ ಮಾಡಿದರೆ, ನಿಮಗೆ ಒಟ್ಟು ರೂ .16.28 ಲಕ್ಷ ಸಿಗುತ್ತದೆ. ಆದರೆ ನೀವು ಹತ್ತು ವರ್ಷಗಳ ಕಾಲ ಈ ರೀತಿ ಹೂಡಿಕೆ ಮಾಡಬೇಕು. ಆದರೆ, ಇಲ್ಲಿ ಆರ್‌ಡಿ ಖಾತೆ ತೆರೆದವರು ಖಂಡಿತವಾಗಿಯೂ ಪ್ರತಿ ತಿಂಗಳು ಹಣವನ್ನು ಕಟ್ಟಬೇಕು. ಇಲ್ಲದಿದ್ದರೆ ದಂಡ ಬೀಳುತ್ತದೆ. ಈಗೆ ಸತತ ನಾಲ್ಕು ತಿಂಗಳು ಪಾವತಿಸದಿದ್ದರೆ ಖಾತೆ ಕ್ಲೋಸ್ ಆಗುತ್ತದೆ.
ಇದನ್ನು ಓದಿ: ಎಚ್ಚರ: ನಿಮ್ಮ ಮೊಬೈಲ್ ಸಂಖ್ಯೆಯಿಂದಲೇ ನಿಮ್ಮ ಖಾತೆಯಲ್ಲಿನ ಹಣ ಮಾಯಾ? ಈ ತಪ್ಪು ಮಾತ್ರ ಮಾಡಬೇಡಿ!