Thunder and lightning: ಗುಡುಗು ಮಿಂಚಿನಿಂದ ಪಾರಾಗುವುದು ಹೇಗೆ? ದಯವಿಟ್ಟು ಗಮನಿಸಿ!

escape Thunder and lightning: ಸದ್ಯ ಈಶಾನ್ಯ ಮುಂಗಾರು ಮಳೆ ಬೀಳುತ್ತಿದೆ.ಈ ಸಮಯದಲ್ಲಿ ಕೃಷಿ ಕೆಲಸವೂ ಜೋರಾಗಿಯೇ ಇದೆ.ಹೀಗಾಗಿ ಕೃಷಿಭೂಮಿಗಳು ಜನರಿಂದ ತುಂಬಿರುವ ಕಾಲವಿದು. ಈ ಹಿನ್ನೆಲೆಯಲ್ಲಿ ಗುಡುಗು ಮತ್ತು ಸಿಡಿಲಿನ ಹೊಡೆತದಿಂದ ಜನರು…

Thunder and lightning

escape Thunder and lightning: ಸದ್ಯ ಈಶಾನ್ಯ ಮುಂಗಾರು ಮಳೆ ಬೀಳುತ್ತಿದೆ.ಈ ಸಮಯದಲ್ಲಿ ಕೃಷಿ ಕೆಲಸವೂ ಜೋರಾಗಿಯೇ ಇದೆ.ಹೀಗಾಗಿ ಕೃಷಿಭೂಮಿಗಳು ಜನರಿಂದ ತುಂಬಿರುವ ಕಾಲವಿದು. ಈ ಹಿನ್ನೆಲೆಯಲ್ಲಿ ಗುಡುಗು ಮತ್ತು ಸಿಡಿಲಿನ ಹೊಡೆತದಿಂದ ಜನರು ತಮ್ಮನ್ನು ಹೇಗೆ ರಕ್ಷಿಸಿಕೊಳ್ಳಬಹುದು ಎಂಬುದರ ಕುರಿತು ತಿಳಿಯೋಣ.

ಇದನ್ನೂ ಓದಿ: ಏನಿದು ಪಿಎಂ ವಿಶ್ವಕರ್ಮ ಯೋಜನೆ? ಸಾಲ ಪಡೆಯುವುದು ಹೇಗೆ? ಇಲ್ಲಿದೆ ನೋಡಿ ಮಾಹಿತಿ

Thunder and lightning: 30/30 ಗುಡುಗು ನಿಯಮ

  • ನೀವು ಮಿಂಚನ್ನು ನೋಡಿದರೆ ಮತ್ತು ಗುಡುಗು ಶಬ್ದವನ್ನು ಕೇಳಿದರೆ 30 ಸೆಕೆಂಡುಗಳಲ್ಲಿ ಕೋಣೆಯೊಳಗೆ ರಕ್ಷಣೆ ಪಡೆಯಿರಿ.
  • ನೀವು ಕನಿಷ್ಟ 30 ನಿಮಿಷಗಳ ಕಾಲ ಗುಡುಗು ಸದ್ದು ಕೇಳದಿದ್ದಾಗ, ನೀವು ಹೊರಗೆ ಬರಬಹುದು.
  • ಮರದ (ಅಥವಾ) ಕಂಬದ ಕೆಳಗೆ ರಕ್ಷಣೆ ತೆಗೆದುಕೊಳ್ಳಬೇಡಿ.
Thunder and lightning
How to escape from thunder and lightning

Thunder and lightning: ಜಲಾವೃತವಾದ ಜಾಗ

ಬೇಸಾಯಕ್ಕೆ ಹೋಗುವ ಮೊದಲು ಯಾವಾಗಲೂ ಹವಾಮಾನ ಸುದ್ದಿಗಳನ್ನು ಪರಿಶೀಲಿಸಿ. ನೀರು ತುಂಬಿರುವ ಗದ್ದೆಯಲ್ಲಿ ಹೊರಾಂಗಣದಲ್ಲಿ ಕೆಲಸ ಮಾಡುವಾಗ ಗುಡುಗು ಅಥವಾ ಮಿಂಚು ಬಂದರೆ ಆ ಜಾಗವನ್ನು ಬಿಟ್ಟು ಒಣ ಭೂಮಿಯಲ್ಲಿ ಅಡ್ಡವಾಗಿ ಕಾಲು ಹಾಕಿ ಕುಳಿತುಕೊಳ್ಳಿ.

Vijayaprabha Mobile App free

ಇದನ್ನೂ ಓದಿ: ಚೆಲುವೆಯ ಅಂದದ ಮುಖಕ್ಕೆ ಜೇನಿನ ಫೇಸ್ ಮಾಸ್ಕ್; ಒಣ, ಒಡೆದ ತುಟಿಗಳ ಆರೈಕೆಗೆ ಜೇನುತುಪ್ಪ ಉತ್ತಮ ಔಷಧಿ

ಅಡ್ಡ ಕಾಲು ಏಕೆ ?

  • ನಿಮ್ಮ ಹಿಮ್ಮಡಿಗಳು ಒಂದಕ್ಕೊಂದು ತಾಗುತ್ತಿರಬೇಕು.ಇದರ ಪರಿಣಾಮವಾಗಿ ನೆಲಕ್ಕೆ ಅಪ್ಪಳಿಸುವ ವಿದ್ಯುತ್‌ ಒಂದು ಕಾಲಿನಿಂದ ಇನ್ನೊ೦ದು ಕಾಲಿನ ಮೂಲಕ ಹರಿಯುತ್ತದೆ.
  • ಹೀಗೆ ಕೂರದಿದ್ದರೆ ಅಪಾಯ ಎದುರಾಗಬಹುದು. ಅದೇ ಸಮಯದಲ್ಲಿ, ಕಿವಿಗಳನ್ನು ಕೈಗಳಿಂದ ಮುಚ್ಚಬೇಕು.
  • ಇದನ್ನು ಮಾಡಬೇಡಿ:
  • ಆಡು, ಹಸುಗಳಂತಹ ಜಾನುವಾರುಗಳನ್ನು ವಿದ್ಯುತ್‌ ಕಂಬಗಳಿಗೆ ಕಟ್ಟಬಾರದು.
  • ಮಿಂಚಿನ ಸಮಯದಲ್ಲಿ ಛತ್ರಿಯನ್ನು ಒಯ್ಯಬೇಡಿ. ಏಕೆಂದರೆ ವಿದ್ಯುತ್ ಛತ್ರಿ ತಂತಿಗಳ ಮೂಲಕ ಹರಿಯಬಹುದು.
  • ಮಳೆ ಬಂದ ನಂತರ ಕೃಷಿ ಪಂಪ್ ಸೆಟ್ ಒದ್ದೆಯಾಗಿದ್ದರೆ ಅದನ್ನು ಮುಟ್ಟಬೇಡಿ.
  • ಶಾರ್ಟ್ ಸರ್ಕ್ಯೂಟ್ ಅಥವಾ ಎಲೆಕ್ನಿಕ್ ಮೋಟರ್ ನಲ್ಲಿ ಬೆಂಕಿ ಕಾಣಿಸಿಕೊಂಡರೆ, ತಕ್ಷಣವೇ ವಿದ್ಯುತ್‌ ಸರಬರಾಜನ್ನು ಕಡಿತಗೊಳಿಸಿ.
  • ಗುಡುಗು ಮತ್ತು ಸಿಡಿಲಿನ ಸಮಯದಲ್ಲಿ ವಿದ್ಯುತ್‌ ಉಪಕರಣಗಳು, ಸೆಲ್ ಫೋನ್ ಇತ್ಯಾದಿಗಳನ್ನು ಬಳಸಬೇಡಿ.
  • ಕೊಯ್ದು ಮಾಡಿದ ಕಾಳುಗಳನ್ನು ಹೊರಗೆ ಇಟ್ಟರೆ ಪಾಲಿಥಿನ್‌ ಕವರ್‌ನಿಂದ ಮುಚ್ಚಲು ಮರೆಯಬೇಡಿ.

ಇದನ್ನೂ ಓದಿ: ನಿಮ್ಮ ಆಧಾರ್ ಯಾವ ಬ್ಯಾಂಕ್ ಖಾತೆಗೆ ಲಿಂಕ್ ಆಗಿದೆ? ತಿಳಿಯಲು ಇಲ್ಲಿದೆ ಸರಳ ಪ್ರಕ್ರಿಯೆ!

ಪ್ರಮುಖ ಲಿಂಕುಗಳು/ Important links

ವಾಟ್ಸಾಪ್ ಗ್ರೂಪ್ಇಲ್ಲಿ ಕ್ಲಿಕ್ ಮಾಡಿ
ಫೇಸ್ ಬುಕ್ ಪೇಜ್ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಗ್ರೂಪ್ಇಲ್ಲಿ ಕ್ಲಿಕ್ ಮಾಡಿ
ಟ್ವಿಟ್ಟರ್ಇಲ್ಲಿ ಕ್ಲಿಕ್ಮಾಡಿ
ಶೇರ್ ಚಾಟ್ಇಲ್ಲಿಕ್ಲಿಕ್ಮಾಡಿ
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.