ಪ್ಯಾನ್ ಆಧಾರ್ ಲಿಂಕ್ : ಪ್ಯಾನ್ ಕಾರ್ಡ್( PAN Card) ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಯು ಅದನ್ನು ಆಧಾರ್ ಕಾರ್ಡ್‌ನೊಂದಿಗೆ (Aadhaar Card) ಲಿಂಕ್ (link PAN Card, Aadhaar Card) ಮಾಡಬೇಕು. ಅದರ ಅವಧಿ ಮುಗಿದಿದ್ದು, ಕೇಂದ್ರ ಸರ್ಕಾರ ಮಾರ್ಚ್ 31ರ ವರೆಗೆ 1000 ರೂ ದಂಡ ಪಾವತಿಯೊಂದಿಗೆ ಅವಕಾಶ ಕಲ್ಪಿಸಿದೆ. ಒಂದು ವೇಳೆ ಮಾರ್ಚ್ 31ರ ಒಳಗೆ ಆಧಾರ್ ಕಾರ್ಡ್ ಜೊತೆ ಪ್ಯಾನ್ ಕಾರ್ಡ್ ಲಿಂಕ್ ಮಾಡದಿದ್ದರೆ ಏಪ್ರಿಲ್ 1 ರಿಂದ ಪ್ಯಾನ್ ಕಾರ್ಡ್ ಕೆಲಸ ಮಾಡುವುದಿಲ್ಲ ಎಂದು ಇಲಾಖೆ ಈಗಾಗಲೇ ಸ್ಪಷ್ಟಪಡಿಸಿದೆ.
ಇದನ್ನು ಓದಿ: ಗುಡ್ ನ್ಯೂಸ್: ರಾಜ್ಯದಲ್ಲಿ ನರೇಗಾ ಕೂಲಿ ಕಾರ್ಮಿಕರ ವೇತನ ಹೆಚ್ಚಳ, ದರಗಳ ಪಟ್ಟಿ ಹೀಗಿದೆ
ಆಧಾರ್-ಪ್ಯಾನ್ ಲಿಂಕ್ ಆಗದಿದ್ದರೆ ಸಮಸ್ಯೆ ಏನು?
▶ ಆಧಾರ್ ಲಿಂಕ್ ಆಗುವ ತನಕ ಪ್ಯಾನ್ ನಿಷ್ಕ್ರೀಯ
▶ ಟಿಡಿಎಸ್. ಟಿಸಿಎಸ್ ಕಡಿತ ಪ್ಯಾನ್ ಇಲ್ಲದೇ ಇದ್ದರೆ ಹೆಚ್ಚು ದರ ಇರುತ್ತದೆ
▶ ಷೇರು ಮಾರುಕಟ್ಟೆಯಲ್ಲಿ ವಹಿವಾಟು ಅಸಾಧ್ಯ
▶ ಬ್ಯಾಂಕ್‌ನಲ್ಲಿ ಹೆಚ್ಚಿನ ಸೇವೆಗಳು ಬಂದ್, 50,000 ರೂ. ಅಧಿಕ ಠೇವಣಿ ಅಸಾಧ್ಯ
▶ ಡೆಬಿಟ್/ ಕ್ರೆಡಿಟ್ ಕಾರ್ಡ್ ಸಿಗುವುದಿಲ್ಲ
▶ ಮ್ಯೂಚುವಲ್ ಪಂಡ್ ಹೂಡಿಕೆ ಬ್ಲಾಕ್
▶ 50,000 ರೂ. ಮೌಲ್ಯಕ್ಕಿಂತ ಅಧಿಕ ವಿದೇಶಿ ಕರೆನ್ಸಿ ಖರೀದಿ ಅಸಾಧ್ಯ
ಇದನ್ನು ಓದಿ:ಸತತ ಏರಿಕೆ ಕಂಡಿದ್ದ ಚಿನ್ನದ ಬೆಲೆ ಕೊಂಚ ಇಳಿಕೆ; ನಿಮ್ಮೂರಲ್ಲಿ ಎಷ್ಟಿದೆ ಚಿನ್ನಾಭರಣದ ಬೆಲೆ
ಸುಲಭವಾಗಿ ಆಧಾರ್ ಕಾರ್ಡ್ ಜೊತೆ ಪ್ಯಾನ್ ಕಾರ್ಡ್ ಲಿಂಕ್ ಮಾಡುವುದು ಹೇಗೆ:
* ಇದಕ್ಕಾಗಿ ಮೊದಲು ಇಲಾಖೆಯ ಅಧಿಕೃತ https://www.incometax.gov.in/ ವೆಬ್‌ಸೈಟ್‌ಗೆ ಹೋಗಿ.
* ನಂತರ ಮುಖಪುಟದ ಎಡಭಾಗದಲ್ಲಿರುವ ಲಿಂಕ್ ಆಧಾರ್ ಆಯ್ಕೆ ಮೇಲೆ ಕ್ಲಿಕ್ ಮಾಡಿ, ನಿಮ್ಮ ಹತ್ತು ಅಂಕಿಯ ಪ್ಯಾನ್ ಸಂಖ್ಯೆಯನ್ನು ನಮೂದಿಸಿ.
* ಅದರ ನಂತರ ಮುಂದುವರಿಸಿ ಆಯ್ಕೆ ಮೇಲೆ ಕ್ಲಿಕ್ ಮಾಡಿ, ಇತರ ವಿವರಗಳನ್ನು ಪೂರ್ಣಗೊಳಿಸಿ, ಪಾಸ್ವರ್ಡ್ ಅನ್ನು ಹೊಂದಿಸಿ, ನಿಮ್ಮ ಪ್ಯಾನ್ ಐಡಿ ಸಂಖ್ಯೆ, ಪಾಸ್‌ವರ್ಡ್, ಜನ್ಮ ದಿನಾಂಕದ ವಿವರಗಳನ್ನು ಅದರಲ್ಲಿ ನಮೂದಿಸಿ.
*ನಂತರ ಲಾಗಿನ್ ಪುಟ ತೆರೆದ ಮೇಲೆ ಆಧಾರ್ ಲಿಂಕ್‌ಗಾಗಿ ಮತ್ತೊಂದು ಹೊಸ ವಿಂಡೋ ಪುಟ ತೆರೆಯುತ್ತದೆ.
ಇದನ್ನು ಓದಿ: ಬೆಂಗಳೂರು ಮೆಟ್ರೋದಲ್ಲಿ ಖಾಯಂ ಉದ್ಯೋಗ; ತಿಂಗಳಿಗೆ 25,000 ರಿಂದ 94500 ರೂ ಸಂಬಳ, ಇಂದೇ ಅರ್ಜಿ ಸಲ್ಲಿಸಿ
* ಅಲ್ಲಿ ಪ್ಯಾನ್‌ಕಾರ್ಡ್ ಇರುವ ಹೆಸರು ಮತ್ತು ಜನ್ಮ ದಿನಾಂಕದ ಎಲ್ಲಾ ವಿವರಗಳನ್ನು ನೋಡಬಹುದು. ಅದರಲ್ಲಿ ಆಧಾರ್ ಮತ್ತು ಪ್ಯಾನ್ ಕಾರ್ಡ್‌ನಲ್ಲಿ ಇರುವ ನಿಮ್ಮ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ, ಎಲ್ಲವೂ ಸರಿಯಾಗಿದೆ ಎಂದು ಖಚಿತಪಡಿಸಿಕೊಂಡ ನಂತರ ಲಿಂಕ್ ಬಟನ್ ಕ್ಲಿಕ್ ಮಾಡಿ.
* ನಂತರ ಪಾವತಿಗಾಗಿ ಮತ್ತೊಂದು ಪುಟ ತೆರೆಯುತ್ತದೆ. ಅದರಲ್ಲಿ ನಿಮ್ಮ ಆದಾಯದ ವಿವರಗಳನ್ನು ನಮೂದಿಸಬೇಕು.
* ನೀವು ಒಂದು ವೇಳೆ ಆದಾಯ ತೆರಿಗೆ ವ್ಯಾಪ್ತಿಗೆ ಒಳಪಡದಿದ್ದರೆ 1000 ಸಾವಿರ ರೂ ಪಾವತಿಸಬೇಕು.ನಂತರ ಆಧಾರ್ ಅನ್ನು ಪ್ಯಾನ್ ಕಾರ್ಡ್‌ಗೆ ಯಶಸ್ವಿಯಾಗಿ ಲಿಂಕ್ ಮಾಡಲಾಗಿದೆ ಎಂಬ ವಿವರಗಳನ್ನು ನೋಡಬಹುದು.
ಇದನ್ನು ಓದಿ: ITR Filing: ಈ ತಿಂಗಳೊಳಗೆ ಆದಾಯ ತೆರಿಗೆ ಸಲ್ಲಿಸಲು ತಪ್ಪಿದರೆ, 5000ರೂ ಬಾರಿ ದಂಡ, ಕಾನೂನು ಕ್ರಮ
1000 ಸಾವಿರ ರೂ ಫೈನ್ ಹೇಗೆ ಪಾವತಿಸಬೇಕು..?
ನಿಮ್ಮ ಆಧಾರ್ ಕಾರ್ಡ್, ಪಾನ್ ಕಾರ್ಡ್ ಲಿಂಕ್ ಮಾಡಲು ಮೊದಲ 1000 ಸಾವಿರ ರೂ ಹಣ ಪಾವತಿಸಬೇಕು. ಇದರಲ್ಲಿ ಎರಡು ವಿಧಾನಗಳು ಲಭ್ಯವಿದ್ದು, ಒಂದು ಇನ್‌ಕಂಟಾಕ್ಸ್ ಡಿಪಾರ್ಟ್‌ಮೆಂಟ್ ವೆಬ್‌ಸೈಟ್, ಎರಡನೆಯದು NSDL ವೆಬ್‌ಸೈಟ್.
ಆದಾಯ ತೆರಿಗೆ(Income tax) ಇಲಾಖೆ ವೆಬ್‌ಸೈಟ್‌ನಲ್ಲಿ ಹೇಗೆ ತಿಳಿಯೋಣ.
ಮೊದಲು ಆದಾಯ ತೆರಿಗೆ ಇಲಾಖೆ ಅಧಿಕೃತ ವೆಬ್‌ಸೈಟ್‌ಗೆ https://www.incometax.gov.in/iec/foportal/ ಹೋಗಿ, ಅದರಲ್ಲಿ ಇ-ಪೇ ತೆರಿಗೆ ಮೇಲೆ ಕ್ಲಿಕ್ ಮಾಡಿ.
ನಂತರ ಎರಡು ಬಾರಿ ಪಾನ್ ನಂಬರ್ ಅನ್ನು ದೃಢೀಕರಿಸಿ ನಂತರ ಫೋನ್ ಸಂಖ್ಯೆ ನಮೂದಿಸಿ, ನಿಮ್ಮ ಫೋನ್‌ಗೆ ಬರುವ ಓಟಿಪಿನಿ ಬರುವ ಪುಟದಲ್ಲಿ ನಮೂದಿಸಬೇಕು.
ಓಟಿಪಿ ಪರಿಶೀಲನೆ ಮಾಡಿದ ನಂತರ ನಿಮಗೆ ಪೇಮೆಂಟ್ ಆಪ್ಷನ್ಸ್ ಕಾಣುತ್ತದೆ ಒಂದನ್ನು ಆರಿಸಿ. ಇದರಲ್ಲಿ ಸಂಬಂಧಿತ ಬ್ಯಾಂಕಿಂಗ್ ಆಯ್ಕೆಗಳು ಇಲ್ಲದಿದ್ದರ ಎರಡನೆಯ ವಿಧಾನ ಅನುಸರಿಸಬೇಕಾಗುತ್ತದೆ.
ಇದನ್ನು ಓದಿ: PPF Account: ಸರ್ಕಾರದ ಈ ಯೋಜನೆ ಲಕ್ಷಾಧಿಪತಿಗಳನ್ನಾಗಿಸುತ್ತದೆ; ಹೂಡಿಕೆ ಕಡಿಮೆ, ಬಡ್ಡಿಯೊಂದಿಗೆ ಕೋಟಿಗೂ ಹೆಚ್ಚು ಲಾಭ..!
ನಂತರ ಈ ಪ್ರಕ್ರಿಯೆಯಲ್ಲಿ ಅಸೆಸ್ಮೆಂಟ್ ವರ್ಷ (Ay-20223-24) ನೀವು ಆಯ್ಕೆ ಮಾಡಿ, ಅದರ ರಿಸಿಪ್ಟ್ಸ್ ಆಯ್ಕೆ ಮಾಡಬೇಕು. ಈ ಪ್ರಕ್ರಿಯೆಗಳು ಮುಗಿದಿದ್ದರೆ ಪೇಮೆಂಟ್ ಗೇಟ್‌ವೆಕು ನಿಮ್ಮನ್ನು ಕರೆದುಕೊಂಡು ಹೋಗುತ್ತದೆ, ಅಲ್ಲಿ ಹಣ ಪಾವತಿಸಬೇಕು.
ನೀವು ಪೇಮೆಂಟ್ ಮಾಡುವುದು ಮುಗಿದ ಮೇಲೆ ವಿವರಗಳನ್ನು ಡೌನ್‌ಲೋಡ್ ಮಾಡಿಕೊಳ್ಳಿ. 4-5 ದಿನಗಳ ನಂತರ ಐಟಿ ಇಲಾಖೆ ಈ ಫೈಲ್ ವೆಬ್‌ಸೈಟ್‌ನಲ್ಲಿನ ಲಿಂಕ್ ಆಧಾರವನ್ನು ಕ್ಲಿಕ್ ಮಾಡಿ ಪ್ಯಾನ್ ಕಾರ್ಡ್ ಸ್ಟೇಟಸ್ ತಿಳಿದುಕೊಳ್ಳಬಹುದು.
ಇದನ್ನು ಓದಿ: ಸರ್ಕಾರದಿಂದ ಎಲ್‌ಪಿಜಿ 200 ರೂ ಸಬ್ಸಿಡಿ ಘೋಷಣೆ; ಏನಿದು ಉಜ್ವಲ ಯೋಜನೆ, ಉಚಿತ ಸಂಪರ್ಕ ಪಡೆಯುವುದು ಹೇಗೆ?
ಎರಡನೆಯದು NSDL ವೆಬ್‌ಸೈಟ್
ಇನ್ನು ಎರಡನೇ ವಿಧಾನ NSDL ಅಧಿಕೃತ egov-nsdl.com ವೆಬ್‌ಸೈಟ್‌ಗೆ ಹೋಗಿ, ಮೊದಲು NON TDS/TCS ಪಾವತಿಗಳಿಗೆ ನಮೂದಿಸಿ.
ಅಲ್ಲಿ ಟಾಕ್ಸ್ ಅಪ್ಲಿಕೇಬಲ್ – (0021) ಆಯ್ಕೆಯನ್ನು ಆರಿಸಿ, ನಂತರ (500) ಅದರ ರಿಸಿಪ್ಟ್ಸ್ ಆಯ್ಕೆಯನ್ನು ಆರಿಸಬೇಕು.
ನಂತರ ಪಾನ್ ಕಾರ್ಡ್, ವರ್ಷ (AY 2023-24), ಪೇಮೆಂಟ್ ವಿಧಾನ, ಇಮೇಲ್, ಮೊಬೈಲ್ ಸಂಖ್ಯೆ, ಅಡ್ರಸ್ ಮುಂತಾದ ವಿವರಗಳನ್ನು ನೀಡಿ, ಕ್ಯಾಪ್ಚಾ ಕೋಡ್ ನಮೂದಿಸಿ ಪೇಮೆಂಟ್ ಪೂರ್ಣಗೊಳಿಸಬೇಕು. ಇಲ್ಲಿಯೂ ಸಹ ಪ್ರಕ್ರಿಯೆ ಪೂರ್ಣಗೊಳ್ಳಲು ನಾಲ್ಕೈದು ದಿನಗಳ ಸಮಯ ತೆಗೆದುಕೊಳ್ಳುತ್ತದೆ.
ಇದನ್ನು ಓದಿ:ನಿಮ್ಮ ಆಧಾರ್ ಕಾರ್ಡ್‌ನಲ್ಲಿ ಹೊಸ ಫೋನ್ ಸಂಖ್ಯೆಯನ್ನು ನವೀಕರಿಸುವುದು, ಬದಲಾಯಿಸುವುದು, ಸೇರಿಸುವುದು ಹೇಗೆ