ಆಧಾರ್ ಕಾರ್ಡ್ ಎಂಬುದು ಭಾರತದಲ್ಲಿ ಪ್ರತಿಯೊಬ್ಬರೂ ಹೊಂದಿರಬೇಕಾದ ಗುರುತಿನ ಚೀಟಿ. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಪ್ರತಿಯೊಂದು ಸಣ್ಣ ವಿಷಯದಲ್ಲೂ ಇದು ಹೆಚ್ಚು ಅಗತ್ಯವಾಗಿರುತ್ತದೆ. ಅದಕ್ಕಾಗಿಯೇ ನಾವು ಅದನ್ನು ಎಚ್ಚರಿಕೆಯಿಂದ ಕಾಪಾಡಿಕೊಳ್ಳಬೇಕು. ಆದರೆ ಕೆಲವೊಮ್ಮೆ ನಮ್ಮ ನಿರ್ಲಕ್ಷ್ಯ ಅಥವಾ ಇನ್ನಾವುದೇ ಕಾರಣದಿಂದ ನಾವು ಕಳೆದುಕೊಂಡರೆ ಚಿಂತಿಸಬೇಕಾಗಿಲ್ಲ. ಯಾಕೆಂದರೆ ನಾವು ಇದನ್ನು ವಿಶಿಷ್ಟ ಗುರುತಿನ ಪ್ರಾಧಿಕಾರದ ಭಾರತ-ಯುಐಡಿಎಐ ವೆಬ್‌ಸೈಟ್‌ನಲ್ಲಿ ಇ-ಆಧಾರ್, ಆಧಾರ್ ಪತ್ರ, ಆಧಾರ್ ಪಿವಿಸಿ ಕಾರ್ಡ್ ರೂಪದಲ್ಲಿ ಪಡೆಯಬಹುದು. ಇದನ್ನು ಪಡೆಯಲು ಹಲವು ವಿಧದ ವಿಧಾನಗಳಿವೆ.
ಆದರೆ ಎಲ್ಲದಕ್ಕಿಂತ ಸುಲಭವಾದ ಮಾರ್ಗವೆಂದರೆ ನಿಮ್ಮ ಮುಖವನ್ನು ಸ್ಕ್ಯಾನ್ ಮಾಡಿ ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡುವುದು
ಇದಕ್ಕಾಗಿ ನಾವು ಮೊದಲು ಯುಐಡಿಎಐ ಅಧಿಕೃತ ವೆಬ್‌ಸೈಟ್ ತೆರೆಯಬೇಕು. “ಡೌನ್” ವಿಭಾಗದಲ್ಲಿ ಮುಖಪುಟದಲ್ಲಿರುವ “ಗೆಟ್ ಆಧಾರ್ ಕಾರ್ಡ್” ವಿಭಾಗದ ಮೇಲೆ ಕ್ಲಿಕ್ ಮಾಡಿ. ಹೊಸ ಪುಟ ತೆರೆಯುತ್ತದೆ. ಮೊದಲು ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ, ನಂತರ ಕ್ಯಾಪ್ಚಾ ಕೋಡ್ ನಮೂದಿಸಿ ಮತ್ತು “ಗೆಟ್ ಒಟಿಪಿ” ಕ್ಲಿಕ್ ಮಾಡಿ. ನಿಮ್ಮ ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಗೆ ಒಟಿಪಿ ಕಳುಹಿಸಲಾಗುತ್ತದೆ. ಒಟಿಪಿಯನ್ನು ನಮೂದಿಸಿ ಮತ್ತು ಪರಿಶೀಲಿಸಿ ಮತ್ತು ನಂತರ ಪೇಸ್ ದೃಡೀಕರಣ ಆಯ್ಕೆಯನ್ನು ಆರಿಸಿ. ದೃಡೀಕರಣ ಪ್ರಕ್ರಿಯೆಯಲ್ಲಿ ನಿಮ್ಮ ಮುಖವನ್ನು ನೀವು ಪರಿಶೀಲಿಸಬೇಕಾಗುತ್ತದೆ. ಇದಕೊಸ್ಕರ ಯಾವುದೇ ರೀತಿಯ ಹಣ ಪಾವತಿಸುವ ಅಗತ್ಯವಿಲ್ಲ.
ಇದನ್ನು ಓದಿ: ಉಚಿತವಾಗಿ 50 ಲಕ್ಷ ರೂ. ಇನ್ಸ್ಯುರೆನ್ಸ್ ಪಡೆಯುವುದು ಹೇಗೆ? ಆಯ್ಕೆಗಳು ಇಲ್ಲಿವೆ!




