WhatsApp | ಮೆಟಾ ಒಡೆತನದ ವಾಟ್ಸ್ಆ್ಯಪ್ ತನ್ನ ಬಳಕೆದಾರರಿಗೆ ಹೊಸ ಅನುಭವ ನೀಡುತ್ತಿದೆ. ಈಗ ನೀವು ನಿಮ್ಮ ಮೊಬೈಲ್ ಅಥವಾ ಲ್ಯಾಪ್ ಟಾಪ್‌ನ ಪರದೆಯನ್ನು ನೇರವಾಗಿ ವಾಟ್ಸ್‌ಆ್ಯಪ್ ವೀಡಿಯೊ ಕಾಲ್ ವೇಳೆ ಹಂಚಿಕೊಳ್ಳಬಹುದು. ಹಿಂದೆ ಇದಕ್ಕಾಗಿ ಗೂಗಲ್ ಮೀಟ್ ಅಥವಾ ಎನಿ ಡೆಸ್ಕ್‌ನಂತಹ ಆ್ಯಪ್‌ಗಳನ್ನು ಬಳಸಬೇಕಾಗಿತ್ತು. ಆದರೆ ಈಗ ವಾಟ್ಸ್‌ಆ್ಯಪ್ ನಲ್ಲಿಯೇ ಸ್ಟ್ರೀನ್ ಶೇರಿಂಗ್ ಸೌಲಭ್ಯ ಲಭ್ಯವಿದೆ. ಇದು ವಿಶೇಷವಾಗಿ ಆನ್‌ಲೈನ್ ಪ್ರೆಸೆಂಟೇಶನ್ ಗಳು, ಡಾಕ್ಯುಮೆಂಟ್ ವಿವರಣೆಗಳು ಅಥವಾ ಟೆಕ್ನಿಕಲ್ ಸಹಾಯ ನೀಡಲು ಬಹಳ ಉಪಯುಕ್ತ.
ಹೇಗೆ ಬಳಸುವುದು?
ಸ್ಟೀನ್ ಹಂಚಿಕೊಳ್ಳಲು ಮೊದಲು ವಾಟ್ಸ್‌ಆ್ಯಪ್ ವೀಡಿಯೊ ಕರೆ ಪ್ರಾರಂಭಿಸಬೇಕು. ಆಡಿಯೊ ಕರೆಗಳಲ್ಲಿ ಈ ವೈಶಿಷ್ಟ್ಯ ಲಭ್ಯವಿಲ್ಲ. ವೀಡಿಯೊ ಕಾಲ್ ವೇಳೆ ಮೇಲ್ಬಾಗದಲ್ಲಿರುವ ಮೂರು ಚುಕ್ಕೆಗಳನ್ನು ಟ್ಯಾಪ್ ಮಾಡಿದಾಗ “ಸ್ಟೀನ್ ಹಂಚಿಕೆ” ಆಯ್ಕೆ ಕಾಣಿಸುತ್ತದೆ. ಅದನ್ನು ಆಯ್ಕೆ ಮಾಡಿದರೆ ನಿಮ್ಮ ಸಂಪೂರ್ಣ ಸ್ಟೀನ್ ಅಥವಾ ನಿರ್ದಿಷ್ಟ ಅಪ್ಲಿಕೇಶನ್ ಹಂಚಿಕೊಳ್ಳಬಹುದು. ಕೆಲಸ ಮುಗಿದ ನಂತರ “ಹಂಚಿಕೆ ನಿಲ್ಲಿಸಿ” ಬಟನ್ ಒತ್ತಿ ಪ್ರಕ್ರಿಯೆ ಮುಗಿಸಬಹುದು. ಇದೇ ಕ್ರಮವನ್ನು ಐಫೋನ್ ಬಳಕೆದಾರರೂ ಅನುಸರಿಸಬಹುದು.
ಎಚ್ಚರಿಕೆ ಅಗತ್ಯ
ಸ್ಟ್ರೀನ್ ಶೇರಿಂಗ್ ವೈಶಿಷ್ಟ್ಯ ಉಪಯುಕ್ತವಾದರೂ, ಸೈಬರ್ ಅಪರಾಧಿಗಳು ಇದನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಬ್ಯಾಂಕ್ ಅಥವಾ ಸರ್ಕಾರಿ ಅಧಿಕಾರಿಗಳಂತೆ ನಟಿಸಿ ವೀಡಿಯೊ ಕರೆ ಮೂಲಕ ಸ್ಟೀನ್ ಹಂಚಿಕೊಳ್ಳಲು ಕೇಳುತ್ತಾರೆ. ಈ ಸಮಯದಲ್ಲಿ ಅವರು OTPಗಳು, ಬ್ಯಾಂಕ್ ವಿವರಗಳು ಮತ್ತು ವೈಯಕ್ತಿಕ ಮಾಹಿತಿಯನ್ನು ಕದ್ದುಕೊಳ್ಳುತ್ತಾರೆ. ಇದರ ಮೂಲಕ ಹಣ ಕಳವು ಮಾಡುವಂತಹ ಪ್ರಕರಣಗಳು ಹೆಚ್ಚಾಗುತ್ತಿವೆ.
ವಂಚನೆ ತಪ್ಪಿಸಲು ಏನು ಮಾಡಬೇಕು?
ಯಾರಾದರೂ ಅಪರಿಚಿತ ವ್ಯಕ್ತಿ ಅಥವಾ ಅಧಿಕಾರಿಯಂತೆ ಕರೆ ಮಾಡಿ ಸ್ಟೀನ್ ಹಂಚಿಕೊಳ್ಳಲು ಕೇಳಿದರೆ, ತಕ್ಷಣ ನಿರಾಕರಿಸಬೇಕು. ಯಾವುದೇ ಬ್ಯಾಂಕ್ ಅಥವಾ ಸರ್ಕಾರಿ ಸಂಸ್ಥೆ ವೀಡಿಯೊ ಕರೆ ಮೂಲಕ ನಿಮ್ಮ ಸ್ಕಿನ್ ಕೇಳುವುದಿಲ್ಲ. ಅಪರಿಚಿತ ಲಿಂಕ್‌ಗಳ ಮೂಲಕ ಅಪ್ಲಿಕೇಶನ್‌ಗಳನ್ನು ಡೌನ್ ಲೋಡ್ ಮಾಡಬಾರದು ಹಾಗೂ ನಿಮ್ಮ ವೈಯಕ್ತಿಕ ವಿವರಗಳನ್ನು ಯಾರಿಗೂ ಹಂಚಿಕೊಳ್ಳಬಾರದು.
ಸುರಕ್ಷಿತವಾಗಿ, ಸ್ಮಾರ್ಟ್ ಆಗಿರಿ
ವಾಟ್ಸ್‌ಆ್ಯಪ್‌ನ ಸ್ಮಿನ್ ಶೇರಿಂಗ್ ವೈಶಿಷ್ಟ್ಯವು ನಿಜಕ್ಕೂ ಸ್ಮಾರ್ಟ್ ಪೀಳಿಗೆಯ ಅಗತ್ಯಕ್ಕೆ ತಕ್ಕ ಹೊಸ ಹೆಜ್ಜೆ ಆದರೆ ಸೈಬರ್ ಜಗತ್ತಿನಲ್ಲಿ ಸುರಕ್ಷತೆ ಎಂದರೆ ಜಾಗೃತಿಯೇ ಶಕ್ತಿ. ವಿಶ್ವಾಸಾರ್ಹ ವ್ಯಕ್ತಿಗಳೊಂದಿಗೆ ಮಾತ್ರ ಈ ವೈಶಿಷ್ಟ್ಯ ಬಳಸಿ, ನಿಮಗೆ ಸೇರಿದ ಮಾಹಿತಿ ಮತ್ತು ಹಣವನ್ನು ರಕ್ಷಿಸಿ. ನಿಮ್ಮ ತಂತ್ರಜ್ಞಾನ ಜ್ಞಾನಕ್ಕೆ ಸ್ವಲ್ಪ ಎಚ್ಚರಿಕೆಯ ಬೆಲೆ ನೀಡಿದರೆ, ವಾಟ್ಸ್‌ಆ್ಯಪ್ ನಿಮ್ಮ ಅತ್ಯಂತ ವಿಶ್ವಾಸಾರ್ಹ ಸಹಾಯಕನಾಗಿರಬಹುದು.




