ಆಯುರ್ವೇದದಲ್ಲಿ ಕೊರೋನಾ ನಿರ್ವಹಣೆ:
* ಪ್ರತಿದಿನ ಎಣ್ಣೆ ಅಥವಾ ತುಪ್ಪ ಹಚ್ಚಿ ಸ್ನಾನ ಮಾಡುವುದು
* ಕೊಬ್ಬರಿ ಎಣ್ಣೆಯಲ್ಲಿ ಬಾಯಿ ಮುಕ್ಕಳಿಸುವುದು
* ಆದಷ್ಟು ಹೊರಗಿನ ಆಹಾರ ವರ್ಜಿಸುವುದು
* ಫ್ರಿಜ್‌ನಲ್ಲಿದ್ದ ಆಹಾರ ತಿನ್ನಬಾರದು
* ಮೂಗಿಗೆ ಎಣ್ಣೆ ಬಿಟ್ಟುಕೊಳ್ಳಬಹುದು
* ಪೌಷ್ಟಿಕ ಆಹಾರದ ಜೊತೆಗೆ ಸರಳ ವ್ಯಾಯಾಮಗಳನ್ನು ಮಾಡುವುದು
* ಪ್ರಾಣಾಯಾಮವನ್ನು ನಿಯಮಿತವಾಗಿ ಮಾಡುವುದು
* ಜೀರ್ಣಶಕ್ತಿ ಸರಿ ಇದ್ದು, ಮನಸ್ಸು ಪ್ರಫುಲ್ಲವಾಗಿರಬೇಕು
* ಗರ್ಭಿಣಿ ಕೊಠಡಿಯಲ್ಲಿ ತುಪ್ಪದ ದೀಪ ಹಚ್ಚಿಡುವುದು
ತಪ್ಪದೇ ಈ ನಿಯಮ ಪಾಲಿಸಿ..
ದೇಶದಲ್ಲಿ ಕರೋನ ಎರಡನೇ ಅಲೆ ಜೋರಾಗಿದ್ದು, ನಿತ್ಯ ಎರಡೂವರೆ ಲಕ್ಷಕ್ಕೂ ಅಧಿಕ ಕೇಸುಗಳು ದಾಖಲಾಗುತ್ತಿದ್ದು, ಈ ಮೂಲಕ ಈ ಹಿಂದಿನ ಎಲ್ಲ ದಾಖಲೆಗಳನ್ನು ಅಳಿಸಿಹಾಕಿದೆ. ಹೀಗಾಗಿ, ನಾವು ಹಾಗೂ ನಮ್ಮವರಿಗಾಗಿ ಈ ನಿಯಮಗಳನ್ನು ಪಾಲಿಸೋಣ.
* ಹೊರಗೆ ಹೋಗುವ ಮುನ್ನ ತಪ್ಪದೆ ಮಾಸ್ಕ್ ಧರಿಸಿ, ವ್ಯಕ್ತಿಗತ ಅಂತರ ಕಾಯ್ದುಕೊಳ್ಳಿ,
* ಕೈಗಳನ್ನು ಸಾಬೂನು/ ಸ್ಯಾನಿಟೈಸರ್ ನಿಂದ ಸ್ವಚ್ಛಗೊಳಿಸಿ.
* 45 ವರ್ಷ ಮೇಲ್ಪಟ್ಟ ಎಲ್ಲ ನಾಗರಿಕರು ತಪ್ಪದೇ ಲಸಿಕೆ ಪಡೆಯಿರಿ.