ಒಬ್ಬ ವ್ಯಕ್ತಿಯು 3ಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ಹೊಂದಿರಬಾರದು ಎಂದು ಹಣಕಾಸು ಸಲಹೆಗಾರರು ಹೇಳುತ್ತಾರೆ. ಒಂದಕ್ಕಿಂತ ಹೆಚ್ಚು ನಿಷ್ಕ್ರಿಯ ಖಾತೆಗಳನ್ನು ಹೊಂದಿರುವುದು ಕ್ರೆಡಿಟ್ ಸ್ಕೋರ್ ಮೇಲೂ ಪರಿಣಾಮ ಬೀರಬಹುದು. ಐಟಿ ರಿಟರ್ನ್ ಸಲ್ಲಿಸುವಾಗ ಎಲ್ಲಾ ಖಾತೆಗಳ ಮಾಹಿತಿ ನೀಡಬೇಕಾಗುತ್ತದೆ.
ಮಿನಿಮಮ್ ಬ್ಯಾಲೆನ್ಸ್ ಹೊಂದಿಲ್ಲದಿದ್ದರೆ, ದಂಡ ತೆರಬೇಕಾಗುತ್ತದೆ. ಹೆಚ್ಚು ಖಾತೆಗಳಿದ್ದರೆ ಸೈಬರ್ ವಂಚನೆಯ ಸಾಧ್ಯತೆ ಕೂಡ ಹೆಚ್ಚಿದೆ. ಹೀಗಾಗಿ, ಅನಗತ್ಯ ಖಾತೆಗಳನ್ನು ಕ್ಲೋಸ್ ಮಾಡುವುದು ಒಳಿತು.
ನೀವು ಹೆಚ್ಚಿನ ಬ್ಯಾಂಕ್ ಖಾತೆಗಳನ್ನು ಹೊಂದಿದ್ದರೆ ಬ್ಯಾಂಕ್ ಖಾತೆ ಮೇಲೆ ವಿವಿಧ ರೀತಿಯ ಶುಲ್ಕಗಳನ್ನು ವಿಧಿಸಲಾಗುತ್ತದೆ. ಯಾವುದೇ ಕಾರಣವಿಲ್ಲದೇ ನಿಮ್ಮ ಮೇಲೆ ಆರ್ಥಿಕ ಹೊರೆ ಹೆಚ್ಚಾಗಬಹುದು.