ಬೆಂಗಳೂರು: ವಿಶ್ವದಾತ್ಯಂತ ಕರೋನ ಸೋಂಕು ಅಬ್ಬರಿಸುತ್ತಿದ್ದು, ನಟ ನಟಿಯರು, ರಾಜಕಾರಿಣಿಗಳು, ಉದ್ಯಮಿಗಳು, ಜನ ಸಾಮಾನ್ಯರು ಸೇರಿ ಕೋಟ್ಯಂತರ ಜನರು ಕರೋನ ಸೋಂಕಿಗೆ ಒಳಗಾಗಿದ್ದು, ವಿಶ್ವದಾತ್ಯಂತ 11 ಲಕ್ಷಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ.
ಇನ್ನು ಕುರಿತಂತೆ ಕರೋನ ಸೋಂಕಿನಿಂದ ಸಾವನ್ನಪ್ಪಿದ ವ್ಯಕ್ತಿಯ ಮೇಲೆ ವೈದ್ಯರು ಸಂಶೋಧನೆ ಮಾಡಿದ್ದಾರೆ. ಜಪಾನ್ ವೈದ್ಯ ಸಮೂಹವು ಮೃತದೇಹವೊಂದನ್ನು ಇಟ್ಟುಕೊಂಡು ಸಂಶೋಧನೆ ನಡೆಸಿದ್ದು, ಕೊರೋನಾ ವೈರಾಣು ಮಾನವನ ಚರ್ಮದ ಮೇಲೆ ಗರಿಷ್ಠ 9 ಗಂಟೆ ಬದುಕುಳಿಯಲಿದೆ ಎಂದು ಮಹತ್ವದ ಮಾಹಿತಿಯನ್ನು ಬಹಿರಂಗ ಪಡಿಸಿದೆ.
ಹಾಗಾಗಿಯೇ ಸೋಂಕು ಒಬ್ಬರಿಂದ ಒಬ್ಬರಿಗೆ ವೇಗವಾಗಿ ಹರಡುತ್ತದೆ ಎಂದು ತಿಳಿಸಿದ್ದಾರೆ. ಈ ವೇಳೆ, ವೈರಾಣು ಹರಡಬಾರದು ಎಂದಾದಲ್ಲಿ ಕೈಗಳನ್ನು ನೀರಿನಿಂದ ಆಗಾಗ ಸ್ವಚ್ಛಗೊಳಿಸಿಕೊಳ್ಳುತ್ತಲೇ ಇರಬೇಕು. ಜೊತೆಗೆ ಕನಿಷ್ಠ 8 ಸೆಕೆಂಡ್ ಎಥನಾಲ್ ಹಾಕಿಕೊಳ್ಳಬೇಕು. ಆಗ ಮಾತ್ರ ಕೊರೋನಾ ವೈರಾಣು ಸಾಯುತ್ತವೆ ಎಂದು ಜಪಾನ್ ವೈದ್ಯರು ಸ್ಪಷ್ಟಪಡಿಸಿದ್ದಾರೆ.