ಮುಂಬೈ: ಮೊದಲನೆ ಮದುವೆ ಕಾನೂನುಬದ್ಧವಾಗಿ ರದ್ದುಗೊಳಿಸದಿದ್ದಲ್ಲಿ 2ನೇ ಹೆಂಡತಿ ತನ್ನ ಮೃತ ಗಂಡನ ಪಿಂಚಣಿ ಪಡೆಯಲು ಅರ್ಹಳಲ್ಲ ಎಂದು ಬಾಂಬೆ ಹೈಕೋರ್ಟ್ ಮಹತ್ವದ ಹೇಳಿಕೆ ನೀಡಿದೆ.
ಹೌದು, ಪಿಂಚಣಿ ಸೌಲಭ್ಯವನ್ನು ನಿರಾಕರಿಸಿರುವ ರಾಜ್ಯ ಸರ್ಕಾರ ನಿರ್ಧಾರ ಪ್ರಶ್ನಿಸಿ ಶ್ಯಾಮಲಾ ಟೇಟ್ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದ್ದು, ಮೃತರ ಮೊದಲ ಪತ್ನಿ ಜೀವಂತವಾಗಿದ್ದಾಗ ಮತ್ತು ಮೊದಲ ಮದುವೆ ಕಾನೂನುಬದ್ಧವಾಗಿ ರದ್ದುಗೊಳಿಸದಿದ್ದಲ್ಲಿ ಮೃತರೊಂದಿಗಿನ ಅರ್ಜಿದಾರರ ವಿವಾಹವು ಅನೂರ್ಜಿತ ಎಂದು ಬಾಂಬೆ ನ್ಯಾಯಾಲಯ ತಿಳಿಸಿದೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.