ದಲಿತ ಶಾಸಕನ ಅಂತರ್ಜಾತಿ ವಿವಾಹ; ಮಹತ್ವದ ತೀರ್ಪು ನೀಡಿದ ಹೈಕೋರ್ಟ್..​!

ಚೆನ್ನೈ: ತಮಿಳುನಾಡಿನ ಎಐಎಡಿಎಂಕೆ ಶಾಸಕ ಪ್ರಭು ಅವರ ಅಂತರ್ಜಾತಿ ವಿವಾಹ ಪ್ರಕರಣಕ್ಕೆ ಸಂಬಂಧಿಸಿದಂತೆ ಮದ್ರಾಸ್​ ಹೈಕೋರ್ಟ್​ ಮಹತ್ವದ ತೀರ್ಪು ನೀಡಿದೆ. ಶಾಸಕ ಪ್ರಭು ಪತ್ನಿ ಸೌಂದರ್ಯರ ತಂದೆ ಸ್ವಾಮಿನಾಥನ್ ಮೇಲ್ಜಾತಿಯವರಾಗಿದ್ದು, ದಲಿತ ಶಾಸಕ ಪ್ರಭು…

intercaste marriage vijayaprabha

ಚೆನ್ನೈ: ತಮಿಳುನಾಡಿನ ಎಐಎಡಿಎಂಕೆ ಶಾಸಕ ಪ್ರಭು ಅವರ ಅಂತರ್ಜಾತಿ ವಿವಾಹ ಪ್ರಕರಣಕ್ಕೆ ಸಂಬಂಧಿಸಿದಂತೆ ಮದ್ರಾಸ್​ ಹೈಕೋರ್ಟ್​ ಮಹತ್ವದ ತೀರ್ಪು ನೀಡಿದೆ.

ಶಾಸಕ ಪ್ರಭು ಪತ್ನಿ ಸೌಂದರ್ಯರ ತಂದೆ ಸ್ವಾಮಿನಾಥನ್ ಮೇಲ್ಜಾತಿಯವರಾಗಿದ್ದು, ದಲಿತ ಶಾಸಕ ಪ್ರಭು ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿ ನನ್ನ ಮಗಳನ್ನು ಅಪಹರಿಸಿ, ಬಲವಂತದಿಂದ ಮದುವೆ ಮಾಡಿಕೊಳ್ಳಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದರು.

ಅಂತರ್ಜಾತಿ ವಿವಾಹ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಪ್ರಭು ಪತ್ನಿ ಸೌಂದರ್ಯರ ತಂದೆ ಸ್ವಾಮಿನಾಥನ್ ಮಾಡಿರುವ ಆರೋಪದಲ್ಲಿ ಹುರುಳಿಲ್ಲ ಎಂದು ಮದ್ರಾಸ್ ಹೈಕೋರ್ಟ್​ ಹೇಳಿದ್ದು, ಈ ಪ್ರಕರಣದಲ್ಲಿ 19 ವರ್ಷದ ಸೌಂದರ್ಯ ವಯಸ್ಕಳಾಗಿದ್ದು, ಸಹಮತದಿಂದಲೇ 35 ವರ್ಷದ ಪ್ರಭು ಅವರನ್ನು ಮದುವೆಯಾಗಿದ್ದಾಳೆ. ಆಕೆಯನ್ನು ಅಪಹರಿಸಿ ಬಲವಂತವಾಗಿ ವಿವಾಹವಾಗಿಲ್ಲ. ಪ್ರಭು ಮತ್ತು ಸೌಂದರ್ಯ ನಿಶ್ಚಿಂತೆಯಿಂದ ಜೀವನ ನಡೆಸಬಹುದು ಎಂದು ಮದ್ರಾಸ್ ಹೈಕೋರ್ಟ್ ತೀರ್ಪು ಪ್ರಕಟಿಸಿದೆ.

Vijayaprabha Mobile App free

ಇದನ್ನು ಓದಿ: ಡೆಲ್ಲಿ ತಂಡದ ಸಾಂಘಿಕ ಪ್ರದರ್ಶನ; ರಾಜಸ್ತಾನ್ ರಾಯಲ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ 49 ರನ್ ಗೆಲುವು

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.