Varamahalakshmi Vrat | ವರಮಹಾಲಕ್ಷ್ಮಿ ವ್ರತಃ ಮಹಿಳೆಯರು ಮಾಡಲೇಬಾರದ 8 ತಪ್ಪುಗಳಿವು

Varamahalakshmi Vrat | ಆಗಸ್ಟ್ 8 ರಂದು ಸಂಪತ್ತಿನ ದೇವತೆ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ದಿನದಂದು ಮುತ್ತೈದೆಯರು ಬಹಳ ಶ್ರದ್ಧಾ ಭಕ್ತಿಯಿಂದ ಮನೆಯಲ್ಲಿ ವರಮಹಾಲಕ್ಷ್ಮಿಯನ್ನು ಕೂರಿಸಿ ಶಾಸ್ತ್ರಬದ್ಧವಾಗಿ ಪೂಜೆ ಸಲ್ಲಿಸುತ್ತಾರೆ. ಆದರೆ ಈ…

Varamahalakshmi Vrat

Varamahalakshmi Vrat | ಆಗಸ್ಟ್ 8 ರಂದು ಸಂಪತ್ತಿನ ದೇವತೆ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ದಿನದಂದು ಮುತ್ತೈದೆಯರು ಬಹಳ ಶ್ರದ್ಧಾ ಭಕ್ತಿಯಿಂದ ಮನೆಯಲ್ಲಿ ವರಮಹಾಲಕ್ಷ್ಮಿಯನ್ನು ಕೂರಿಸಿ ಶಾಸ್ತ್ರಬದ್ಧವಾಗಿ ಪೂಜೆ ಸಲ್ಲಿಸುತ್ತಾರೆ. ಆದರೆ ಈ ವ್ರತದ ದಿನ 8 ತಪ್ಪುಗಳನ್ನು ಮಾಡಲೇಬಾರದು ಎನ್ನಲಾಗುತ್ತದೆ. ಆ ಕುರಿತಾದ ಮಾಹಿತಿ ಇಲ್ಲಿದೆ.

ವರವನ್ನು ನೀಡುವ ಲಕ್ಷ್ಮಿ

ವರಲಕ್ಷ್ಮಿ ಪೂಜೆ ಈ ಹೆಸರೇ ಸೂಚಿಸುವಂತೆ ವರವನ್ನು ನೀಡುವ ಲಕ್ಷ್ಮಿ ಎಂದರ್ಥವಾಗಿದ್ದು, ಸಮೃದ್ಧಿ ಹಾಗೂ ದೈವಿಕ ರೂಪವಾದ ಲಕ್ಷ್ಮಿಯನ್ನು ಪೂಜಿಸುವ ಸುದಿನವಾಗಿದ್ದು, ಶ್ರಾವಣ ಮಾಸದಲ್ಲಿ ಶುಕ್ಲ ಪಕ್ಷದ ಶುಕ್ರವಾರದಂದು ವರಮಹಾಲಕ್ಷ್ಮಿ ವ್ರತಾಚರಣೆ ಮಾಡಲಾಗುತ್ತದೆ. ಆದರೆ ಹಿಂದೂ ಸಂಪ್ರದಾಯದಲ್ಲಿ ಈ ದಿನ ಬಹಳ ವಿಶೇಷ ಮಹತ್ವ ನೀಡಲಾಗಿದೆ.

ಈ ತಪ್ಪುಗಳು ನಿಮ್ಮಿಂದ ಆಗದಿರಲಿ

1) ಲಕ್ಷ್ಮಿ ದೇವಿಯನ್ನು ಮೆಟ್ಟಿಲುಗಳ ಕೆಳಗೆ, ಶೌಚಾಲಯ, ಸ್ನಾನಗೃಹದ ಹತ್ತಿರ & ಸ್ವಚ್ಛವಲ್ಲದ ಸ್ಥಳಗಳಲ್ಲಿ ಕೂರಿಸಬೇಡಿ.

Vijayaprabha Mobile App free

2) ಹಬ್ಬದ ದಿನ ಪೂಜೆ ಮಾಡುವ ಸ್ಥಳದಲ್ಲಿ, ದೇವರ ಕೋಣೆಯಲ್ಲಿ ಮುರಿದ ವಿಗ್ರಹಗಳನ್ನು ಇಡಬಾರದು.

3) ವರಮಹಾಲಕ್ಷ್ಮಿಯನ್ನು ಮರದ ಕುರ್ಚಿ ಮೇಲೆ ಕೂರಿಸಿ. ಕಬ್ಬಿಣದ ಮೇಲೆ ಲಕ್ಷ್ಮಿಯನ್ನು ಕೂರಿಸಿ ಪೂಜೆ ಮಾಡಬೇಡಿ.

4) ಅಲಂಕಾರಕ್ಕಾಗಿ ಪ್ಲಾಸ್ಟಿಕ್ ಹೂವುಗಳು, ಹಣ್ಣು ಬಳಸಿ ವರಮಹಾಲಕ್ಷ್ಮಿ ವ್ರತಾಚರಣೆ ಮಾಡಬೇಡಿ.

ಈ ತಪ್ಪುಗಳು ನಿಮ್ಮಿಂದ ಆಗದಿರಲಿ

5) ನೀವೇನಾದ್ರೂ ಕಲಶವಿಟ್ಟು ಪೂಜೆ ಮಾಡುತ್ತಿದ್ದರೆ, ತ್ರಾಮದ ಕಲಶವನ್ನು ಬಳಸುವುದು ಸೂಕ್ತ.

6) ಅಲಂಕಾರಕ್ಕೆ ತುಕ್ಕು ಹಿಡಿದ ಆಭರಣಗಳನ್ನು ಬಳಸುವುದು ತಪ್ಪಿಸಿ. ಪೂಜೆಯ ವೇಳೆ ಮನಸ್ಸು ಶುದ್ಧವಾಗಿರಲಿ.

7) ಈ ವ್ರತಾಚರಣೆಗೆ ಸಾಲವಾಗಿ ತಂದ ಹಣ & ಆಭರಣಗಳನ್ನು ಬಳಸಬೇಡಿ. ಇದರಿಂದ ದೇವಿ ಮುನಿಸಿಕೊಳ್ಳುತ್ತಾಳೆ.

8) ಇನ್ನು, ಈ ಸಮಯದಲ್ಲಿ ದೀಪ ಬೆಳಗಿಸಲು ಅಡುಗೆಗೆ ಬಳಸಿದ ಎಣ್ಣೆಯನ್ನು ಯಾವುದೇ ಕಾರಣಕ್ಕೂ ಬಳಸಬಾರದು. ಇದರಿಂದ ಪೂಜೆಗೆ ತಕ್ಕ ಫಲವು ಸಿಗುವುದಿಲ್ಲ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.