ಚಮೋಲಿ: ಉತ್ತರಾಖಂಡ ರಾಜ್ಯದ ಚಮೋಲಿ ಜಿಲ್ಲೆಯ ರೆನಿ ಗ್ರಾಮದ ಸಮೀಪದ ಧೌಲಿಗಂಗಾ ನದಿಯಲ್ಲಿ ಭಾರಿ ಹಿಮ ಪ್ರವಾಹ ಉಂಟಾಗಿದೆ. ಜೋಷಿಮಠದಿಂದ ೨೫ ಕಿಲೋ ಮೀಟರ್ ದೂರದಲ್ಲಿರುವ ರೆನಿ ಗ್ರಾಮದ ಸಮೀಪದ ಧೌಲಿಗಂಗಾ ನದಿಯಲ್ಲಿ ಭಾರಿ ಹಿಮಪಾತದಿಂದಾಗಿ ಅಣೆಕಟ್ಟು ಹೊಡೆದುಹೋಗಿದ್ದು, ಇದರಿಂದ ರಿಷಿ ಗಂಗಾ ವಿದ್ಯುತ್ ಯೋಜನೆಗೆ ಭಾರಿ ಹಾನಿಯಾಗಿದೆ.
ಇನ್ನು ನದಿ ಪಾತ್ರದ ಅನೇಕ ಮನೆಗಳಿಗೆ ಭಾರಿ ಹಾನಿಯಾಗಿದ್ದು, ಋಷಿಕೇಶಿಯಿಂದ ಹರಿದ್ವಾರ ತನಕ ಜನರಿಗೆ ಎಚ್ಚರಿಕೆ ನೀಡಲಾಗಿದೆ. ಬೃಹತ್ ಪ್ರಮಾಣದ ನೀರಿನ ಪ್ರವಾಹದಿಂದ ಅನೇಕ ಜನರು ಕೊಚ್ಚಿ ಹೋಗಿದ್ದಾರೆ ಎಂದು ವರದಿಯಾಗಿದ್ದು, ಐಟಿಬಿಪಿ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.