ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಚುರುಕಾಗಿದ್ದು, ಇಂದು ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣವಿದ್ದು, ಹಗುರದಿಂದ ಕೂಡಿದ್ದ ಮಳೆಯಾಗಲಿದ್ದು, ಸಂಜೆ ವೇಳೆ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ. ಜೊತೆಗೆ ದಕ್ಷಿಣ ಒಳನಾಡು ಸೇರಿ ಕರಾವಳಿ, ಮಲೆನಾಡು ಭಾಗದಲ್ಲಿ ಇಂದಿನಿಂದ ಜೂನ್ 26ರವರೆಗೆ ಗುಡುಗು ಸಹಿತ ಧಾರಾಕಾರ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಬಾದಾಮಿ, ಬಳ್ಳಾರಿ, ಬೆಳಗಾವಿ, ಬೆಂಗಳೂರು ನಗರ, ಚಿತ್ರದುರ್ಗ, ಧಾರವಾಡ, ಗದಗ, ಗೋಕರ್ಣ, ಹೊನ್ನಾವರ, ಕಲಬುರ್ಗಿ, ಕಾರವಾರ, ಹಂಪಿ, ಮಡಿಕೇರಿ, ಮಂಡ್ಯ, ಮಂಗಳೂರು, ಮೈಸೂರು, ವಿಜಯಪುರ ಮತ್ತು ರಾಯಚೂರಿನ ಸುತ್ತಮುತ್ತ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.
ಇನ್ನು, ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಪ್ರಮುಖ ಜಿಲ್ಲೆಗಳ ತಾಪಮಾನ:
ಬೆಂಗಳೂರು: 26-19, ಮಂಗಳೂರು: 28-24, ಶಿವಮೊಗ್ಗ: 26-21, ಬೆಳಗಾವಿ: 24-21, ಮೈಸೂರು: 27-21, ಕೋಲಾರ: 28-21, ತುಮಕೂರು: 27-20, ಉಡುಪಿ: 28-24, ಕಾರವಾರ: 27-25, ಚಿತ್ರದುರ್ಗ: 27-21, ಹಾವೇರಿ: 27-22, ಬಳ್ಳಾರಿ: 31-23, ಗದಗ: 28-22, ಯಾದಗಿರಿ: 32-24, ವಿಜಯಪುರ: 29-22, ಬೀದರ್: 29-22, ಕಲಬುರಗಿ: 31-23, ಬಾಗಲಕೋಟೆ: 29-23, ಕೊಪ್ಪಳ: 29-23, ರಾಯಚೂರು: 32-24, ಚಿಕ್ಕಮಗಳೂರು: 23-18, ದಾವಣಗೆರೆ: 27-22, ಮಂಡ್ಯ: 28-21, ಧಾರವಾಡ: 27-23, ಕೊಡಗು: 23-18, ರಾಮನಗರ: 28-21, ಹಾಸನ: 24-19, ಚಾಮರಾಜನಗರ: 28-21ಹಾಗೂ ಚಿಕ್ಕಬಳ್ಳಾಪುರದಲ್ಲಿ 27-20 ಡಿಗ್ರಿ ಸೆಲ್ಸಿಯಸ್ ಇರಲಿದೆ.