ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿದ್ದು, ಬೆಂಗಳೂರಿನಲ್ಲಿ ಮುಂದಿನ 5 ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಹೌದು, ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿದ್ದು,3.1 ಕಿ.ಮೀ ಟರ್ಫ್ ಇದ್ದು, ಸಮುದ್ರಮಟ್ಟದಿಂದ 8.5 ಕಿ.ಮೀ.ನಷ್ಟು ಮೇಲ್ಮೈ ಸುಳಿಗಾಳಿ ಬೀಸುತ್ತಿದ್ದು, ಪರಿಣಾಮ ರಾಜ್ಯದಲ್ಲಿ ಮುಂದಿನ ಒಂದು ವಾರ ಕಾಲ ನಿರೀಕ್ಷೆಗೂ ಮೀರಿದ ಮಳೆಯಾಗುವ ಮುನ್ಸೂಚನೆ ಇದ್ದು, ಹಾಗಾಗಿ ಜನ ಸುರಕ್ಷಿತ ಸ್ಥಳಗಳಲ್ಲಿರಬೇಕು. ಸಮುದ್ರಕ್ಕೆ ಯಾರೂ ಇಳಿಯಬಾರದೆಂದು ಎಚ್ಚರಿಸಿದೆ ಹವಾಮಾನ ಇಲಾಖೆ ತಿಳಿಸಿದೆ.
17 ಜಿಲ್ಲೆಗಳಿಗೆ ಅಲರ್ಟ್!
ಇನ್ನು, ರಾಜ್ಯ ಸೇರಿ ದೇಶದ ಹಲವಾರು ರಾಜ್ಯಗಳಲ್ಲಿ ಭಾರೀ ಮಳೆಯಾಗುತ್ತಿದೆ. ರಾಜ್ಯದಲ್ಲಿ ಸುರಿಯುತ್ತಿರುವ ರಣ ಭೀಕರ ಮಳೆಗೆ ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದ್ದು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಧಾರವಾಡ, ಬಳ್ಳಾರಿ, ದಾವಣಗೆರೆ, ಬೆಳಗಾವಿ, ಗದಗ, ಬೆಂಗಳೂರು, ಹಾವೇರಿ, ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಮತ್ತು ರಾಮನಗರ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ.
ವಿವಿದ ನಗರಗಳ ತಾಪಮಾನ :
ಬೆಂಗಳೂರು: 28-21, ಮಂಗಳೂರು: 28-24, ಶಿವಮೊಗ್ಗ: 29-22, ಬೆಳಗಾವಿ: 27-21, ಮೈಸೂರು: 29-21, ಚಾಮರಾಜನಗರ: 29-21, ಚಿಕ್ಕಬಳ್ಳಾಪುರ:28-20, ಕೋಲಾರ: 29-21, ತುಮಕೂರು: 28-21, ದಾವಣಗೆರೆ: 29-22, ಮಂಡ್ಯ: 29-21, ಕೊಡಗು: 24-18, ರಾಮನಗರ: 29-21, ಹಾಸನ: 27-19, ಉಡುಪಿ: 28-24, ಕಾರವಾರ: 29-24, ಚಿಕ್ಕಮಗಳೂರು: 26-19, ಚಿತ್ರದುರ್ಗ: 29-21, ಹಾವೇರಿ: 29-22, ಬಳ್ಳಾರಿ: 32-23, ಗದಗ: 30-22 , ಕೊಪ್ಪಳ: 31-23, ರಾಯಚೂರು: 32-23, ಯಾದಗಿರಿ: 32-24, ವಿಜಯಪುರ: 30-23 , ಬೀದರ್:30-22, ಕಲಬುರಗಿ: 32-23, ಬಾಗಲಕೋಟೆ:31-23 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ.