ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನಲೆ ತಮಿಳುನಾಡಿನ ಕರಾವಳಿ ಭಾಗಕ್ಕೆ ಚಂಡ ಮಾರುತಗಳು ಅಪ್ಪಳಿಸುವ ಸಾಧ್ಯತೆಯಿದ್ದು, ಇದರ ಪರಿಣಾಮದಿಂದ ಕಾರೈಕಾಲ್, ಪುಡಿಚೇರಿ, ಅಂದ್ರಪ್ರದೇಶ , ಕೇರಳ ಸೇರಿದಂತೆ ಹಲವು ಕಡೆ ಬಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ತಮಿಳುನಾಡು ಮತ್ತು ಪುದುಚೇರಿಯಲ್ಲಿ ನಿವಾರ್ ಚಂಡ ಮಾರುತದಿಂದ ಉಂಟಾಗಿದ್ದ ತೊಂದರೆಗಳಿಂದ ಚೇತರಿಸಿಕೊಳ್ಳುವ ಬೆನ್ನಲ್ಲೇ, ಈಗ ಬಂಗಾಳ ಕೊಲ್ಲಿಯಲ್ಲಿ ಮತ್ತೆ ವಾಯುಭಾರ ಕುಸಿತ ಹಿನ್ನಲೆ ಚಂಡ ಮಾರುತಗಳು ಅಪ್ಪಳಿಸುವ ಸಾಧ್ಯತೆ ಇದ್ದು, ಮುಂದಿನ 36 ಗಂಟೆಗಳಲ್ಲಿ ಕರ್ನಾಟಕದ ಸೇರಿದಂತೆ ಹಲವೆಡೆ ಬಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.
ಹೌದು ಹರಬ್ಬಿ ಸಮುದ್ರದಲ್ಲಿ ಸಹ ವಾಯುಭಾರ ಕುಸಿತ ಉಂಟಾಗಿದ್ದು ಚಂಡಮಾರುತ ಏಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಡಿಸೆಂಬರ್ 1 ರಿಂದ 4 ವರೆಗೆ ರಾಜ್ಯದ ಹಲವೆಡೆ ಬಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.
ಇದನ್ನು ಓದಿ: ಗ್ರಾ.ಪಂ.ಚುನಾವಣೆಗೆ ದಿನಾಂಕ ಫಿಕ್ಸ್; ಡಿ.22 ಹಾಗು ಡಿ.27ರಂದು ಎರಡು ಹಂತಗಳಲ್ಲಿ ಚುನಾವಣೆ