ಅರಬ್ಬಿ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಹಿನ್ನೆಲೆ ರಾಜ್ಯದಲ್ಲಿ ಇನ್ನೂ ಎರಡು ದಿನಗಳ ಕಾಲ ಭಾರಿ ಗಾಳಿ ಸಹಿತ ಮಳೆಯಾಗುವ ಸಾಧ್ಯತೆಯಿದ್ದು, ರಾಜ್ಯದ ಕರಾವಳಿ ಹಾಗೂ ಮಲೆನಾಡಿನ ಜಿಲ್ಲೆಗಳ ಹಲವೆಡೆ ಜುಲೈ 20 ರವರೆಗೆ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಹೌದು, ದಕ್ಷಿಣ ಒಳನಾಡಿನ ಹಾಸನ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯ ಒಂದೆರೆಡು ಕಡೆಗಳಲ್ಲಿ ಭಾರಿ ಮಳೆಯಾಗಲಿದ್ದು, ಕರಾವಳಿಯ ಕೆಲ ಜಿಲ್ಲೆಗಳಲ್ಲಿ ಸಾದಾರಣ ಮಳೆಯಾಗಲಿದೆ ಎಂದು ತಿಳಿಸಿದೆ.
ಈ ಹಿನ್ನೆಲೆ ರಾಜ್ಯದ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ಉತ್ತರ ಒಳನಾಡಿಗು ಕೂಡ ಯಲ್ಲೋ ಅಲರ್ಟ್ ಘೋಷಿಸಿದ್ದು, ಕರಾವಳಿಯಲ್ಲಿ ಬಿರುಗಾಳಿಯ ವೇಗವು ಪ್ರತಿ ಘಂಟೆಗೆ 45-55 ಕಿ.ಮೀ ವರೆಗೂ ತಲುಪುವ ಸಾಧ್ಯತೆ ಇದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಸೂಚಿಸಿದೆ.
ವಿವಿಧ ನಗರಗಳ ಇಂದಿನ ತಪಮಾನ :
ಬೆಂಗಳೂರು: 34-22, ಮಂಗಳೂರು: 33-27, ಶಿವಮೊಗ್ಗ: 37-23, ಬೆಳಗಾವಿ: 36-22, ಮೈಸೂರು: 35-22, ಮಂಡ್ಯ: 36-23, ಕೊಡಗು: 31-20, ರಾಮನಗರ: 37-23, ಹಾಸನ: 35-21, ಚಾಮರಾಜನಗರ: 34-22, ಚಿಕ್ಕಬಳ್ಳಾಪುರ: 34-19, ಕೋಲಾರ: 34-2, ತುಮಕೂರು: 36-22, ಉಡುಪಿ: 33-27, ಕಾರವಾರ: 33-27, ಚಿಕ್ಕಮಗಳೂರು: 34-21, ದಾವಣಗೆರೆ: 38-23, ಚಿತ್ರದುರ್ಗ: 37-23, ಹಾವೇರಿ: 37-23, ಬಳ್ಳಾರಿ: 39-26, ಗದಗ: 37-24, ಕೊಪ್ಪಳ: 38-24, ರಾಯಚೂರು: 39-26, ಯಾದಗಿರಿ: 39-27, ವಿಜಯಪುರ: 38-27, ಬೀದರ್: 38-26, ಕಲಬುರಗಿ: 39-27, ಬಾಗಲಕೋಟೆ: 38-26 ಡಿಗ್ರಿ ಸೆಲ್ಸಿಯಸ್ ಇರಲಿದೆ.