Heavy rain: ಕಳೆದೊಂದು ವಾರದಿಂದ ತಗ್ಗಿದ್ದ ಮಳೆ ಮತ್ತೆ ಚುರುಕುಗೊಂಡಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಕರ್ನಾಟಕದ 20 ಜಿಲ್ಲೆಗಳಲ್ಲಿ ಸೆಪ್ಟಂಬರ್ 29 ರವರೆಗೂ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ (Meteorological Department) ಮುನ್ಸೂಚನೆ ನೀಡಿದೆ.
ಹೌದು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಕೋಲಾರ, ರಾಮನಗರ, ಶಿವಮೊಗ್ಗ, ತುಮಕೂರಿನಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಇದನ್ನೂ ಓದಿ: ಸ್ಟೇಷನ್ ಮಾಸ್ಟರ್ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿ; ಆಸಕ್ತ ಹಾಗು ಅರ್ಹರ ಅಭ್ಯರ್ಥಿಗಳು ಅರ್ಜಿಸಲ್ಲಿಸಿ
Heavy rain: ಹಲವೆಡೆ ಟ್ರಾಫಿಕ್ ಜಾಮ್
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಬೆಂಗಳೂರಿನಲ್ಲಿ ರಾತ್ರಿ ಭಾರೀ ಮಳೆ ಸುರಿದಿದೆ. ಹೀಗಾಗಿ ಹಲವೆಡೆ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿತ್ತು. ಯಾದಗಿರಿ, ಕಲಬುರ್ಗಿ, ಶೃಂಗೇರಿ, ಧಾರವಾಡ, ಕೊಪ್ಪಳ, ಗದಗ್‌ನಲ್ಲೂ ನಿನ್ನೆ ಭಾರೀ ಮಳೆ ಸುರಿದಿದ್ದು, ಯಾದಗಿರಿಯಲ್ಲಿ ನಾಲ್ವರು ಸಿಡಿಲಿಗೆ ಬಲಿಯಾಗಿದ್ದಾರೆ.
ಇದನ್ನೂ ಓದಿ: ಸಿಂಹ, ತುಲಾ ಸೇರಿದಂತೆ ಈ ರಾಶಿಯವರಿಗೆ ಅದ್ಭುತ ಲಾಭ; 12 ರಾಶಿಗಳ ಮಂಗಳವಾರದ ದಿನಭವಿಷ್ಯ
ಸಿಡಿಲು ಬಡಿದು ನಾಲ್ವರು ಸಾವು: ಮೂರವರು ಗಂಭೀರ..!
ಇನ್ನು, ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದಿದ್ದು, ನಾಲ್ಕು ಜನ ಮೃತಪಟ್ಟ ಘಟನೆಯು ಯಾದಗಿರಿ ತಾಲೂಕಿನ ಜೀನಕೇರ ತಾಂಡಾ ಬಳಿ ಜಮೀನಿನಲ್ಲಿ ನಡೆದಿದೆ.
ಹೌದು, ಈ ಘಟನೆಯುಲ್ಲಿ ನೇನು(18), ಚೇನು(22), ಕಿಶನ್(30) ಮತ್ತು ಸುಮಿ ಬಾಯಿ(30) ಎಂಬವರು ಮೃತಪ್ಟಿದ್ದು, ಸಿಡಿಲು ಬಡಿದ ಇನ್ನೂ ಮೂವರಿಗೆ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಯಾದಗಿರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಇದನ್ನೂ ಓದಿ: ಗೃಹಲಕ್ಷ್ಮಿಯರಿಗೆ ಬಂಪರ್ ಸುದ್ದಿ: ಈ ದಿನದಂದು ನಿಮ್ಮ ಖಾತೆ ಸೇರಲಿದೆ ರೂ.6000 ಹಣ!?