ಯುಗಾದಿ ಹಬ್ಬಕ್ಕೂ ಮುನ್ನ ಮಳೆ ಅವಾಂತರ ಸೃಷ್ಟಿಯಾಗಿತ್ತು. ಈಗ ಮತ್ತೊಮ್ಮೆ ಇಂದಿನಿಂದ ಎರಡು ದಿನಗಳ ಕಾಲ ಬೆಂಗಳೂರು ಮತ್ತು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಮಂಡ್ಯ, ಮೈಸೂರು, ಬಳ್ಳಾರಿ, ಚಾಮರಾಜನಗರ, ತುಮಕೂರು, ರಾಯಚೂರು ಜಿಲ್ಲೆಗಳಲ್ಲಿ ಹವಾಮಾನ ಇಲಾಖೆಯಿಂದ ಗುಡುಗು ಸಹಿತ ಮಹಿಳೆಯಾಗುವ ಮುನ್ಸೂಚನೆ ನೀಡಲಾಗಿದೆ.
ರಾಜ್ಯದಲ್ಲಿ ಬಿಸಿಲ ಬೇಗೆ ಹೆಚ್ಚುತ್ತಲೇ ಇದೆ. ಇದೀಗ ರಾಜ್ಯದಲ್ಲಿ ತಂಪಿನ ವಾತಾವರಣ ಕಂಡುಬರಲಿದೆ. ಇಂದು ಹಲವು ಕಡೆ ಮೋಡಕವಿದ ವಾತಾವರಣವಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರ್ನಾಟಕ ಹೊರತುಪಡಿಸಿ, ಆಂಧ್ರ ಪ್ರದೇಶ, ತೆಲಂಗಾಣ, ಕೇರಳದಲ್ಲೂ ಮಳೆಯಾಗುವ ನಿರೀಕ್ಷೆಯಿದೆ ಎಂದು ತಜ್ಞರು ಮಾಹಿತಿ ನೀಡಿದ್ದಾರೆ.
ಇದನ್ನು ಓದಿ: ಖ್ಯಾತ ನಟಿ ಪವಿತ್ರಾ ಲೋಕೇಶ್, ನರೇಶ್ ಲವ್ವಿಡವ್ವಿ, ಮದುವೆ, ಹನಿಮೂನ್ ಬಣ್ಣ ಬಯಲು; ಇದಕ್ಕಾಗಿ ಇಷ್ಟೆಲ್ಲಾ ಮಾಡಿದ್ರಾ..?
ಇನ್ನು, ರಾಜ್ಯದ ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಉತ್ತರ ಕರ್ನಾಟಕದಲ್ಲಿ ಗರಿಷ್ಠ 37 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.
ಇದನ್ನು ಓದಿ: ವಿಚ್ಛೆದಿತ ಖ್ಯಾತ ನಟನೊಂದಿಗೆ ಪತಿ ಕಳೆದುಕೊಂಡ ಖ್ಯಾತ ನಟಿಯ ಮದುವೆ: ಧನುಷ್,ಮೀನಾ ಮದುವೆ ಬಗ್ಗೆ ಸ್ಪೋಟಕ ಮಾಹಿತಿ..!