ರಾಜ್ಯದಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಹಲವು ಜಿಲ್ಲೆಗಳಲ್ಲಿ ಸೆಪ್ಟೆಂಬರ್ 9ರವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು, ಶಿವಮೊಗ್ಗ, ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಿಗೆ ಇಂದು ಮತ್ತು ನಾಳೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಇನ್ನು, ಉಳಿದ ಜಿಲ್ಲೆಗಳಲ್ಲಿ ಗುಡುಗು, ಸಿಡಿಲು ಸಹಿತ ಮಳೆಯಾಗಲಿದೆ. ಕರಾವಳಿ ತೀರದಲ್ಲಿ ವೇಗವಾದ ಗಾಳಿ ಬೀಸುತ್ತಿರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಪ್ರಮುಖ ನಗರಗಳ ತಾಪಮಾನ:
ಬೆಂಗಳೂರು: 30-20, ಮಂಗಳೂರು: 31-26, ಶಿವಮೊಗ್ಗ: 33-20, ಬೆಳಗಾವಿ: 32-19, ಮೈಸೂರು: 32-20, ಮಂಡ್ಯ: 32-20, ರಾಮನಗರ: 32-20, ಹಾಸನ: 29-19 ಚಾಮರಾಜನಗರ: 32-20, ಚಿಕ್ಕಬಳ್ಳಾಪುರ: 29-16, ಕೋಲಾರ: 30-16, ತುಮಕೂರು: 31-18, ಉಡುಪಿ: 31-25, ಕಾರವಾರ: 31-24, ಚಿಕ್ಕಮಗಳೂರು: 29-19, ದಾವಣಗೆರೆ: 33-19, ಚಿತ್ರದುರ್ಗ: 32-19, ಹಾವೇರಿ: 33-18, ಬಳ್ಳಾರಿ: 33-2, ಗದಗ: 33-19, ಕೊಪ್ಪಳ: 33-20, ರಾಯಚೂರು: 33-22 ಡಿಗ್ರಿ ಸೆಲ್ಸಿಯಸ್ ಇರಲಿದೆ.