ರಾಜ್ಯದಲ್ಲಿ ಆ.12ರ ತನಕ ಭಾರೀ ಮಳೆ..!; ಗಂಟೆಗೆ 60 ಕಿ.ಮೀ ವೇಗದಲ್ಲಿ ಬೀಸಲಿದೆ ಗಾಳಿ

ರಾಜ್ಯದಲ್ಲಿ ಇನ್ನೆರಡು ದಿನ ಭಾರೀ ಮಳೆಯಾಗುವ ಮುನ್ಸೂಚನೆ ಇದ್ದು, ರಾಜ್ಯದ 8 ಜಿಲ್ಲೆಗಳಲ್ಲಿ ಇಂದು ಸೇರಿ ಇನ್ನೂ ಎರಡು ದಿನಗಳ ಕಾಲ ಭಾರೀ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.…

rain-vijayaprabha-news

ರಾಜ್ಯದಲ್ಲಿ ಇನ್ನೆರಡು ದಿನ ಭಾರೀ ಮಳೆಯಾಗುವ ಮುನ್ಸೂಚನೆ ಇದ್ದು, ರಾಜ್ಯದ 8 ಜಿಲ್ಲೆಗಳಲ್ಲಿ ಇಂದು ಸೇರಿ ಇನ್ನೂ ಎರಡು ದಿನಗಳ ಕಾಲ ಭಾರೀ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಹೌದು, ರಾಜ್ಯದ ಕರಾವಳಿ ಭಾಗದ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಆಗಸ್ಟ್ 12ರವರೆಗೆ ಭಾರೀ ಪ್ರಮಾಣದ ಗುಡುಗು ಸಹಿತ ಮಳೆ ಅಬ್ಬರಿಸುವ ಸಾಧ್ಯತೆ ಇದೆ ಎಂದು ಹೇಳಿದೆ.

ಈ ವೇಳೆ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಈ ಅವಧಿಯಲ್ಲಿ ಗಂಟೆಗೆ 60 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದೆ. ಅಲೆಗಳ ಅಬ್ಬರವೂ ಇರಲಿದ್ದು, ಸಮುದ್ರಕ್ಕೆ ಯಾರೂ ಇಳಿಯದಂತೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Vijayaprabha Mobile App free

ಇಂದಿನ ಹವಾಮಾನ ವರದಿ:

ಬೆಂಗಳೂರು: 27-19
ದಾವಣಗೆರೆ: 26-21
ಚಿತ್ರದುರ್ಗ: 26-21
ಹಾವೇರಿ: 26-21
ಬಳ್ಳಾರಿ: 30-23
ಗದಗ: 26-21
ಕೊಪ್ಪಳ: 28-22
ಮಂಗಳೂರು: 28-23
ಶಿವಮೊಗ್ಗ: 26-21
ಬೆಳಗಾವಿ: 23-20
ಮೈಸೂರು: 27-20
ಮಂಡ್ಯ: 28-21
ಕೊಡಗು: 21-17
ರಾಮನಗರ: 28-21
ಹಾಸನ: 23-19
ಚಾಮರಾಜನಗರ: 28-21
ಚಿಕ್ಕಬಳ್ಳಾಪುರ: 28-19
ಕೋಲಾರ: 28-20
ತುಮಕೂರು: 27-20
ಉಡುಪಿ: 28-24
ಚಿಕ್ಕಮಗಳೂರು: 22-18
ರಾಯಚೂರು: 30-23
ಯಾದಗಿರಿ: 29-23
ವಿಜಯಪುರ: 28-22
ಬೀದರ್: 26-21
ಕಲಬುರಗಿ: 28-23
ಬಾಗಲಕೋಟೆ: 28-22 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.