ರಾಜ್ಯದಾತ್ಯಂತ ಮುಂದಿನ 5 ದಿನ ಭಾರೀ ಮಳೆ…! ಹಲವೆಡೆ ಯೆಲ್ಲೋ ಅಲರ್ಟ್ ಘೋಷಣೆ

ರಾಜ್ಯದಾತ್ಯಂತ ಮತ್ತೆ ಮಳೆ ಆರ್ಭಟ ಮತ್ತೆ ಪ್ರಾರಂಭವಾಗಿದ್ದು, ಮತ್ತೆ ಮುಂಗಾರು ಅಬ್ಬರಿಸುವ ಎಲ್ಲ ಲಕ್ಷಣಗಳು ಕಂಡು ಬಂದಿದೆ. ರಾಜ್ಯದ ಕರಾವಳಿ, ಮಲೆನಾಡು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ 5 ದಿನ ಭಾರೀ ಮಳೆಯಾಗುವ…

rain-vijayaprabha-news

ರಾಜ್ಯದಾತ್ಯಂತ ಮತ್ತೆ ಮಳೆ ಆರ್ಭಟ ಮತ್ತೆ ಪ್ರಾರಂಭವಾಗಿದ್ದು, ಮತ್ತೆ ಮುಂಗಾರು ಅಬ್ಬರಿಸುವ ಎಲ್ಲ ಲಕ್ಷಣಗಳು ಕಂಡು ಬಂದಿದೆ. ರಾಜ್ಯದ ಕರಾವಳಿ, ಮಲೆನಾಡು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ 5 ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಕರಾವಳಿ ಭಾಗದ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ ವ್ಯಾಪಕ ಮಳೆಯಾಗುವ ಸಾಧ್ಯತೆ ಇದ್ದು ಯೆಲ್ಲೋ ಅಲರ್ಟ್ ಘೋಷಿಸಿದ್ದು, ಆಗಸ್ಟ್ 23 ಹಾಗೂ 24 ರಂದು ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇನ್ನು, ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು ಮಳೆಯಾಗುವ ಸಾಧ್ಯತೆ ಇದ್ದು, ದಾವಣಗೆರೆ, ಚಿಕ್ಕಮಗಳೂರು, ಉಡುಪಿ, ಕೊಡಗು, ಶಿವಮೊಗ್ಗ, ಮಂಗಳೂರು ಜಿಲ್ಲೆಯಲ್ಲಿ ಮುಂಜಾನೆ ತುಂತುರು ಮಳೆಯಾಗಲಿದ್ದು, ಮಧ್ಯಾಹ್ನದ ವೇಳೆಗೆ ಬಿಸಿಲಿನ ತಾಪಮಾನ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.

Vijayaprabha Mobile App free

ವಿವಿಧ ನಗರಗಳ ಹವಾಮಾನ ವರದಿ:

ಬೆಂಗಳೂರು: 28-20
ದಾವಣಗೆರೆ: 28-21
ಚಿತ್ರದುರ್ಗ: 28-21
ಹಾವೇರಿ: 27-21
ಬಳ್ಳಾರಿ: 32-23
ಗದಗ: 28-21
ಕೊಪ್ಪಳ: 31-22
ಮಂಗಳೂರು: 27-23
ಶಿವಮೊಗ್ಗ: 27-21
ಬೆಳಗಾವಿ: 25-21
ಮೈಸೂರು: 27-20
ಮಂಡ್ಯ: 28-21
ಕೊಡಗು: 22-17
ರಾಮನಗರ: 29-21
ಹಾಸನ: 25-19
ಚಾಮರಾಜನಗರ: 28-21
ಚಿಕ್ಕಬಳ್ಳಾಪುರ: 28-20
ಕೋಲಾರ: 29-21
ತುಮಕೂರು: 28-20
ಉಡುಪಿ: 28-24
ಚಿಕ್ಕಮಗಳೂರು: 24-28
ರಾಯಚೂರು: 32-23
ಯಾದಗಿರಿ: 32-23
ವಿಜಯಪುರ: 29-22
ಬೀದರ್: 29-21
ಕಲಬುರಗಿ: 31-22
ಬಾಗಲಕೋಟೆ: 30-23 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.