Heavy rain: ರಾಜ್ಯದ 25ಕ್ಕೂ ಅಧಿಕ ಜಿಲ್ಲೆಗಳಲ್ಲಿ ಏಪ್ರಿಲ್ 8 ರ ಬಳಿಕ ಮಳೆಯಾಗಲಿದ್ದು, ಏಪ್ರಿಲ್ 6 ರಿಂದ ಕೊಡಗು, ಚಿಕ್ಕಮಗಳೂರು, ಮೈಸೂರು, ಮಂಡ್ಯ, ಹಾಸನ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು,ಇದರ ಜೊತೆಗೆ ಉಷ್ಣಾಂಶವೂ ಏರಿಕೆಯಾಗಲಿದೆ ಎಂದು ಹೇಳಿದೆ.
ಇದನ್ನು ಓದಿ: ಊಟ ಮಾಡಿದ ತಕ್ಷಣ ಟೀ, ಕಾಫಿ ಕುಡಿದ್ರೆ ಏನಾಗುತ್ತೆ ಗೊತ್ತಾ? ಈ ಸಮಸ್ಯೆ ನಿಮಗೂ ಬರಬಹುದು
ದಕ್ಷಿಣ ಕನ್ನಡ, ಬೀದರ್, ಕಲಬುರ್ಗಿ, ಕೊಡಗು, ಮಂಡ್ಯ ಮತ್ತು ಮೈಸೂರು ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದ್ದು, ಏಪ್ರಿಲ್ 7 ರಂದು ಚಿಕ್ಕಮಗಳೂರು, ತುಮಕೂರು ಮತ್ತು ಹಾಸನದಲ್ಲಿಯೂ ಮಳೆಯಾಗುವ ಸಂಭವವಿದೆ. ಏಪ್ರಿಲ್ 8 ಮತ್ತು 9 ರಂದು ಕರಾವಳಿ ಮತ್ತು ಮಲೆನಾಡು ಸೇರಿ 18 ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
Heavy rain: ಕೊಡಗಿನಲ್ಲಿ ಭಾರೀ ಮಳೆ..
ರಾಜ್ಯದಲ್ಲಿ ತಾಪಮಾನ ದಿನೇ ದಿನೆ ಏರುತ್ತಿದ್ದರೂ ಇದೀಗ ನಿಧಾನವಾಗಿ ಮಳೆ ಆರಂಭವಾಗುವ ಲಕ್ಷಣ ಕಾಣಿಸುತ್ತಿದೆ. ಕೊಡಗು, ಚಿಕ್ಕಮಗಳೂರು ಜಿಲ್ಲೆಯಲ್ಲಿ ನಿನ್ನೆ ಸಹ ಮಳೆಯಾಗಿದ್ದು, ಜನರಲ್ಲಿ ಸಂತಸ ಮೂಡಿಸಿದೆ. ಕೊಡಗಿನ ಹಳೆತಾಲ್ಲೂಕು, ನಾಪೋಕ್ಲು ಮತ್ತು ಕಡಂಗದಲ್ಲಿ ಭಾರಿ ಮಳೆಯಾಗಿದ್ದು, ತಲಕಾವೇರಿಯಲ್ಲೂ ಮಳೆಯಾಗುತ್ತಿದೆ.
ಇದನ್ನು ಓದಿ: ಪ್ರತಿದಿನ ಬೆಳಿಗ್ಗೆ ಒಂದು ಕಪ್ ಬಿಸಿ ನೀರು ಏಕೆ ಕುಡಿಯಬೇಕು? ಬಿಸಿ ನೀರು ಕುಡಿದರೆ ಎಷ್ಟೆಲ್ಲಾ ಪ್ರಯೋಜನ
ಇನ್ನು, ಯುಗಾದಿ ಬಳಿಕ ರಾಜ್ಯದ ಹಲವು ಕಡೆಗಳಲ್ಲಿ ಮಳೆಯಾಗುವ ನಿರೀಕ್ಷೆ ಇದ್ದು, ಬೆಂಗಳೂರಿನಲ್ಲೂ ಏಪ್ರಿಲ್ 2ನೇ ವಾರದಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಪ್ರಮುಖ ಲಿಂಕುಗಳು/ Important links
ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಫೇಸ್ ಬುಕ್ ಪೇಜ್ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಟ್ವಿಟ್ಟರ್ | ಇಲ್ಲಿ ಕ್ಲಿಕ್ಮಾಡಿ |