ಮೇಲ್ಮೈ ಸುಳಿಗಾಳಿ.. ಮುಂದಿನ ಐದು ದಿನ ಭಾರಿ ಮಳೆ; ಈ 8 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌!

ಬಂಗಾಳ ಕೊಲ್ಲಿ ಮತ್ತು ಅರಬ್ಬಿ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಏರ್ಪಟ್ಟಿದ್ದು, ಈ ಹಿನ್ನೆಲೆಯಲ್ಲಿ ಮುಂದಿನ ಐದು ದಿನ ಕರ್ನಾಟಕವೂ ಸೇರಿದಂತೆ ದಕ್ಷಿಣದ ರಾಜ್ಯಗಳಲ್ಲಿ ಭಾರಿ ಮಳೆ ಸಾಧ್ಯತೆಯಿದ್ದು, ರಾಜ್ಯದ 8 ಜಿಲ್ಲೆಗಳಿಗೆ ಭಾರೀ ಮಳೆ…

rain-vijayaprabha-news

ಬಂಗಾಳ ಕೊಲ್ಲಿ ಮತ್ತು ಅರಬ್ಬಿ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಏರ್ಪಟ್ಟಿದ್ದು, ಈ ಹಿನ್ನೆಲೆಯಲ್ಲಿ ಮುಂದಿನ ಐದು ದಿನ ಕರ್ನಾಟಕವೂ ಸೇರಿದಂತೆ ದಕ್ಷಿಣದ ರಾಜ್ಯಗಳಲ್ಲಿ ಭಾರಿ ಮಳೆ ಸಾಧ್ಯತೆಯಿದ್ದು, ರಾಜ್ಯದ 8 ಜಿಲ್ಲೆಗಳಿಗೆ ಭಾರೀ ಮಳೆ ಎಚ್ಚರಿಕೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ.

ಕರಾವಳಿ ಸೇರಿ ಚಿಕ್ಕಮಗಳೂರು, ಮೈಸೂರು, ಚಾಮರಾಜನಗರ, ಹಾಸನ, ಕೊಡಗು, ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಲ್ಲಿ ಇಂದು ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ. ರಾಜ್ಯದ ಬಹುತೇಕ ಕಡೆ ಮುಂದಿನ 2 ದಿನ ಮಳೆಯಾಗಲಿದ್ದು, ಕೆಲವು ಜಿಲ್ಲೆಗಳಲ್ಲಿ ತುಂತುರು ಮಳೆಯಾಗಬಹುದು ಎನ್ನಲಾಗಿದ್ದು, ಕರಾವಳಿಯಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಇನ್ನು, ಬೆಂಗಳೂರಲ್ಲಿ ಮೋಡ ಮುಸುಕಿದ ವಾತಾವರಣವಿದ್ದು, ಹಗುರ ಮಳೆ ಸಾಧ್ಯತೆ ಬಗ್ಗೆ ಇಲಾಖೆ ಹೇಳಿದೆ.

ಪ್ರಮುಖ ನಗರಗಳ ತಾಪಮಾನ :

Vijayaprabha Mobile App free

ಬೆಂಗಳೂರು: 27-19, ಮಂಗಳೂರು: 28-24, ಶಿವಮೊಗ್ಗ: 28-21, ಬೆಳಗಾವಿ: 27-20, ಮೈಸೂರು: 28-19, ಮಂಡ್ಯ: 30-20,ಮಡಿಕೇರಿ: 23-16, ರಾಮನಗರ: 28-19, ಹಾಸನ: 27-18, ಚಾಮರಾಜನಗರ: 29-20, ಚಿಕ್ಕಬಳ್ಳಾಪುರ: 24-18, ಕೋಲಾರ: 27-20, ತುಮಕೂರು: 27-19, ಉಡುಪಿ: 28-24, ಕಾರವಾರ: 29-24, ಚಿಕ್ಕಮಗಳೂರು: 26-18, ದಾವಣಗೆರೆ: 29-21, ಚಿತ್ರದುರ್ಗ: 28-20, ಹಾವೇರಿ: 29-21, ಬಳ್ಳಾರಿ: 28-22, ಗದಗ: 29-21, ಕೊಪ್ಪಳ: 29-22, ರಾಯಚೂರು: 28-23, ಯಾದಗಿರಿ: 28-23, ವಿಜಯಪುರ: 29-22, ಬೀದರ್: 25-21, ಕಲಬುರಗಿ: 28-22, ಬಾಗಲಕೋಟೆ: 30-22 ಡಿಗ್ರಿ ಸೆಲ್ಸಿಯಸ್ ಇರಲಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.