ರಾಜ್ಯದಲ್ಲಿ ಮಳೆ ಮತ್ತೆ ಆರಂಭವಾಗುವ ಸಾಧ್ಯತೆ ಇದ್ದು, ಬೆಂಗಳೂರು ಸೇರಿ 4 ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಹೌದು, ದಕ್ಷಿಣ ಅಂಡಮಾನ್ ಸಮುದ್ರದಲ್ಲಿ ಸುಳಿಗಾಳಿ ಎದ್ದಿದ್ದು, ಇದರ ಪ್ರಭಾವದಿಂದಾಗಿ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತಗೊಂಡಿದ್ದು, ರಾಜ್ಯದೆಲ್ಲೆಡೆ ಮತ್ತೆ ಮಳೆಯಾಗುವ ಸಾಧ್ಯತೆ ಇದೆ ಎಂದು ರಾಜ್ಯ ಹವಾಮಾನ ಇಲಾಖೆ ಮಳೆ ಎಚ್ಚರಿಕೆ ನೀಡಿದೆ. ಇಂದು ಪುದುಚೆರಿ ಸೇರಿ ಹಲವು ಕಡೆ ಭಾರೀ ಮಳೆಯಾಗುವ ನಿರೀಕ್ಷೆ ಇದ್ದು, ಈ ಪರಿಣಾಮ ರಾಜ್ಯದ ಮೇಲೂ ಆಗಲಿದೆ.
ಪ್ರಮುಖ ನಗರಗಳ ತಾಪಮಾನ:
ಬೆಂಗಳೂರು: 24-16, ಮಂಗಳೂರು: 32-23, ಶಿವಮೊಗ್ಗ: 31-17, ಬೆಳಗಾವಿ: 30-15, ಮೈಸೂರು: 27-18, ಮಂಡ್ಯ: 28-18, ಮಡಿಕೇರಿ: 26-16, ರಾಮನಗರ: 27-17, ಹಾಸನ: 27-17, ಚಾಮರಾಜನಗರ: 25-19, ಚಿಕ್ಕಬಳ್ಳಾಪುರ: 24-16, ಕೋಲಾರ: 24-16, ತುಮಕೂರು: 27-17, ಉಡುಪಿ: 33-22, ಕಾರವಾರ: 34-23, ಚಿಕ್ಕಮಗಳೂರು: 27-16, ದಾವಣಗೆರೆ: 30-17 ಡಿಗ್ರಿ ಸೆಲ್ಸಿಯಸ್ ಇರಲಿದೆ