ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಅಬ್ಬಲಗೇರಿ ಹತ್ತಿರ ರೈಲ್ವೆ ಕ್ರಷರ್‌ನಲ್ಲಿ ಭಾರಿ ಸ್ಪೋಟ ಸಂಭವಿಸಿದ್ದು, ಕಲ್ಲು ಗಣಿಗಾರಿಕೆಗೆಂದು ಲಾರಿಯಲ್ಲಿ ಡೈನಮೈಟ್ ಸಾಗಿಸುತ್ತಿದ್ದ ಸ್ಫೋಟಗೊಂಡಿರುವ ಘಟನೆ ನಿನ್ನೆ ತಡರಾತ್ರಿ ನಡೆದಿದೆ. ಸ್ಫೋಟಗೊಂಡ ಲಾರಿಯಲ್ಲಿ ಸುಮಾರು ಇಲ್ಲಿಯವರೆಗೆ 8 ಜನರ ಮೃತದೇಹ ಪತ್ತೆಯಾಗಿದೆ. ವಾಹನದಲ್ಲಿ ಡೈನಮೈಟ್ ಸಾಗಿಸುತ್ತಿದ್ದ ವೇಳೆ ಅವಘಡ ಸಂಭವಿಸಿದ್ದು, ಸುತ್ತಲೂ ಕೆಟ್ಟ ವಾಸನೆ ಹರಡಿದೆ ಎಂದು ಶಿವಮೊಗ್ಗ ಗ್ರಾಮಾಂತರ ಶಾಸಕ ಅಶೋಕ್ ಕುಮಾರ್ ತಿಳಿಸಿದ್ದಾರೆ.
ಡೈನಮೈಟ್ ಸ್ಪೋಟ: ಹೆಚ್ಚುತ್ತಿರುವ ಸಾವಿನ ಸಂಖ್ಯೆ
ರೈಲ್ವೆ ಕ್ರಷರ್‌ನಲ್ಲಿ ಕಲ್ಲು ಗಣಿಗಾರಿಕೆಗೆಂದು ಲಾರಿಯಲ್ಲಿ ಸಾಗಿಸುತ್ತಿದ್ದ ವೇಳೆ ಡೈನಮೈಟ್ ಸ್ಫೋಟಗೊಂಡಿರುವ ಘಟನೆ ನಡೆದಿದೆ ಎನ್ನಲಾಗಿದ್ದು, ಸ್ಫೋಟದಿಂದ ಸಾವನ್ನಪ್ಪಿದವರ ಸಂಖ್ಯೆ ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದ್ದು, ಸದ್ಯ ಇಲ್ಲಿಯವರೆಗೆ 8 ಜನ ಮೃತರಾಗಿರುವಂತೆ ತಿಳಿದುಬಂದಿದೆ. ಮೃತದೇಹಗಳು ಸಂಪೂರ್ಣ ಛಿದ್ರವಾಗಿದೆ. ಇನ್ನು ರಾತ್ರಿಯಾಗಿರುವ ಹಿನ್ನಲೆ ಕಾರ್ಯಾಚರಣೆಗೆ ತೊಡಕಾಗುತ್ತಿದ್ದು, ಲೈವ್ ಡೈನಮೈಟ್‌ಗಳನ್ನು ಪತ್ತೆ ಮಾಡಲಾಗುತ್ತಿದೆ.
ಸ್ಪೋಟ ನಡೆದ ಸ್ಥಳಕ್ಕೆ ಆಗಮಿಸಿದ ಬಾಂಬ್ ಸ್ಕ್ವಾಡ್:
ಅಬ್ಬಲಗೇರಿ ಹತ್ತಿರ ರೈಲ್ವೆ ಕ್ರಷರ್‌ನಲ್ಲಿ ಡೈನಮೈಟ್ ಸ್ಪೋಟ ಸಂಭವಿಸಿದ್ದು, ಇನ್ನು ಜೀವಂತ ಇರುವ ಡೈನಮೈಟ್ ಅಪರೇಷನ್‌ಗಾಗಿ ಮಂಗಳೂರು ಮತ್ತು ಬೆಂಗಳೂರಿನಿಂದ ಒಂದೊಂದು ಬಾಂಬ್ ಸ್ಕ್ವಾಡ್ ಆಗಮಿಸಿದೆ. ಸದ್ಯ ಘಟನಾ ಸ್ಥಳದ ಸುತ್ತ ಬ್ಯಾರಿಕೇಡ್ ಹಾಕಿ ನಿಷೇಧಿತ ಪ್ರದೇಶವೆಂದು ಗುರುತಿಸಲಾಗಿದೆ. ಸ್ಥಳಕ್ಕೆ ಯಾರು ಬರದಂತೆ ನಿರ್ಬಂಧ ಹೇರಲಾಗಿದೆ.