ಆಂಧ್ರಪ್ರದೇಶ : ಆಂಧ್ರ ಪ್ರದೇಶದಲ್ಲಿ ಕತ್ತೆ ಮಾಂಸಕ್ಕೆ ಭಾರೀ ಬೇಡಿಕೆ ಸೃಷ್ಟಿಯಾಗಿದ್ದು, ಇತರೆ ರಾಜ್ಯಗಳಿಂದ ಹೆಚ್ಚಿನ ಹಣ ಕೊಟ್ಟು ಕತ್ತೆಗಳನ್ನು ಖರೀದಿ ಮಾಡಲಾಗುತ್ತಿದೆ ಎನ್ನಲಾಗಿದೆ.
ಕತ್ತೆ ಮಾಂಸವನ್ನು ಮಾಂಸವನ್ನು ತಿನ್ನುವುದರಿಂದ ದೈಹಿಕವಾಗಿ ಬಲಗೊಳ್ಳಬಹುದು. ಲೈಂಗಿಕ ಸಾಮರ್ಥ್ಯ ಹೆಚ್ಚುತ್ತದೆ ಎಂಬ ಕಾರಣಕ್ಕೆ ಕತ್ತೆಗಳನ್ನು ಅಕ್ರಮವಾಗಿ ವಧೆ ಮಾಡಿ, ಅದರ ಮಾಂಸವನ್ನು ಮಾರಾಟ ಮಾಡಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ, ಇತರೆ ರಾಜ್ಯಗಳಿಂದ ಒಂದು ಕತ್ತೆಗೆ ₹15 ಸಾವಿರಕ್ಕೂ ಹೆಚ್ಚು ಹಣವನ್ನು ಕೊಟ್ಟು ಖರೀದಿ ಮಾಡಲಾಗುತ್ತಿದೆ. ಇನ್ನು ಕತ್ತೆಯನ್ನು ಸರ್ಕಾರ ತಿನ್ನುವ ಪ್ರಾಣಿ ಎಂದು ಗುರುತಿಸಿಲ್ಲ. ಕಾನೂನಿನ ಪ್ರಕಾರ ಕತ್ತೆ ವಧೆ ಮಾಡುವುದು ಅಪರಾಧವಾಗಿದೆ.