ಲೈಂಗಿಕ ಪ್ರಕರಣದಲ್ಲಿ ಚಿತ್ರದುರ್ಗದ ಮುರುಘಾ ಮಠದ ಸ್ವಾಮೀಜಿ ಡಾ.ಶಿವಮೂರ್ತಿ ಶ್ರೀಗಳ ಮೇಲೆ ಪೋಕ್ಸೋ ಪ್ರಕರಣದಲ್ಲಿ ಕೊನೆಗೂ ಅರೆಸ್ಟ್ ಮಾಡಲಾಗಿದ್ದು, ಎದೆ ನೋವಿನ ಕಾರಣದಿಂದ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮುರುಘಾ ಮಠದ ಶ್ರೀಗಳು ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಈ ಹಿನ್ನೆಲೆ ಹೆಚ್ಚಿನ ತಪಾಸಣೆಗಾಗಿ ಚಿತ್ರದುರ್ಗ ಡಿಸಿ ಆದೇಶದಂತೆ ಇಬ್ಬರು ಹೃದ್ರೋಗ ತಜ್ಞರನ್ನು ಕರೆಸಲಾಗಿದೆ.
ಹೌದು, ಡಿಎಚ್ಒ ಡಾ.ರಂಗನಾಥ್ ಈ ಬಗ್ಗೆ ಮಾಹಿತಿ ನೀಡಿದ್ದು, ‘ಶ್ರೀಗಳು ಹೃದಯಾಘಾತಕ್ಕೆ ಒಳಗಾಗಿದ್ದಾರೆ. ನಮ್ಮಲ್ಲಿರುವ ಎಲ್ಲಾ ತಪಾಸಣೆ ಮಾಡಲಾಗಿದೆ. ಶ್ರೀಗಳಿಗೆ 60 ವರ್ಷ ವಯಸ್ಸಾಗಿದ್ದು ದೇಹ ತುಂಬಾ ಸೂಕ್ಷ್ಮ ಆಗಿದೆ. ಹೃದಯ ತಜ್ಞರ ಸಲಹೆ ಮೇರೆ ಮುಂದೇನು ಎಂಬ ಬಗ್ಗೆ ನಿರ್ಧಾರ ಆಗಲಿದೆ’ ಎಂದು ಹೇಳಿದ್ದಾರೆ.