ತುಮಕೂರು: 6 ತಿಂಗಳ ಹಿಂದೆ ಮರಣ ಹೊಂದಿದ್ದ ವ್ಯಕ್ತಿಗೆ ಎರಡನೇ ಡೋಸ್ ಕರೋನ ವ್ಯಾಕ್ಸಿನ್ ಪಡೆದಿರುವ ಸರ್ಟಿಫಿಕೆಟ್ ನೀಡಿ ಆರೋಗ್ಯ ಇಲಾಖೆ ಮಹಾ ಎಡವಟ್ಟು ಮಾಡಿದೆ.
ಹೌದು, ತುಮಕೂರು ನಗರದ ಮೆಳೆಕೋಟೆ ನಿವಾಸಿ ಬಸಪ್ಪ(80) ಎಂಬುವರು 2021ರ ಏಪ್ರಿಲ್ 9ರಂದು ಕೋವಿಡ್ ಲಸಿಕೆಯ ಮೊದಲ ಡೋಸ್ ತೆಗೆದುಕೊಂಡಿದ್ದರು. ಈ ನಡುವೆ ಬಸಪ್ಪ ಅವರು ಜುಲೈ 16 ರಂದು ಮೃತಪಟ್ಟಿದ್ದಾರೆ. ಆದರೆ ಜನವರಿ 29ರಂದು ಎರಡನೇ ಕರೋನ ಲಸಿಕೆ ತೆಗೆದುಕೊಂಡಿರುವ ಬಗ್ಗೆ ಮೆಸೆಜ್ ಬಂದಿದೆ.
ಇನ್ನು, ಈ ವಿಚಾರವಾಗಿ ಸಂಬಂಧಿಕರು ಸೈಟ್ ಓಪನ್ ಮಾಡಿದಾಗ ಸರ್ಟಿಫಿಕೆಟ್ ಅಪ್‍ಡೇಟ್ ಆಗಿದ್ದು, ವ್ಯಕ್ತಿ ಮರಣ ಹೊಂದಿ 6 ತಿಂಗಳಾದರೂ ಸತ್ತ ವ್ಯಕ್ತಿಗೆ ಹೇಗೆ ಕರೋನ ಲಸಿಕೆ ಕೊಟ್ರು ಎಂದು ಮೃತ ಬಸವಪ್ಪ ಅವರ ಕುಟುಂಬ ಆಶ್ಚರ್ಯ ವ್ಯಕ್ತಪಡಿಸಿದ್ದು, ಜೊತೆಗೆ ಆರೋಗ್ಯ ಇಲಾಖೆಯ ಈ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.