ಮತ್ತೆ GST ದರ ಪರಿಷ್ಕರಣೆ: ಮತ್ತಷ್ಟು ವಸ್ತುಗಳ ಮೇಲೆ ಜಿಎಸ್‌ಟಿ ಹೆಚ್ಚಳ..?

ಈಗಾಗಲೇ ಹಲವು ವಸ್ತುಗಳಿಗೆ ನೀಡಲಾಗಿರುವ ಜಿಎಸ್‌ಟಿ ವಿನಾಯಿತಿ ವಾಪಸ್‌ ಪಡೆಯುವಂತೆ ಸಲಹೆ ನೀಡುವ ಹಾಗೂ ಮುಂದಿನ ತಿಂಗಳು ಮತ್ತಷ್ಟು ಉತ್ಪನ್ನಗಳ ಜಿಎಸ್‌ಟಿಯನ್ನು ಹೆಚ್ಚಳ ಮಾಡುವ ಸಾಧ್ಯತೆಗಳು ಇವೆ ಎಂದು ಹೇಳಲಾಗ್ತಿದೆ. ಹೌದು, ಕಳೆದ ತಿಂಗಳು…

gst vijayaprabhanews

ಈಗಾಗಲೇ ಹಲವು ವಸ್ತುಗಳಿಗೆ ನೀಡಲಾಗಿರುವ ಜಿಎಸ್‌ಟಿ ವಿನಾಯಿತಿ ವಾಪಸ್‌ ಪಡೆಯುವಂತೆ ಸಲಹೆ ನೀಡುವ ಹಾಗೂ ಮುಂದಿನ ತಿಂಗಳು ಮತ್ತಷ್ಟು ಉತ್ಪನ್ನಗಳ ಜಿಎಸ್‌ಟಿಯನ್ನು ಹೆಚ್ಚಳ ಮಾಡುವ ಸಾಧ್ಯತೆಗಳು ಇವೆ ಎಂದು ಹೇಳಲಾಗ್ತಿದೆ.

ಹೌದು, ಕಳೆದ ತಿಂಗಳು ಮೊಸರು, ಹಾಲು, ಅಕ್ಕಿ, ಜೋಳದ ಹಿಟ್ಟು ಸೇರಿದಂತೆ ಅನೇಕ ಆಹಾರ ಪದಾರ್ಥಗಳ ತೆರಿಗೆ ವಿನಾಯಿತಿಯನ್ನು ಜಿಎಸ್‌ಟಿ ಮಂಡಳಿ ವಾಪಸ್ ಪಡೆದಿತ್ತು. ಈಗ ಸೆಪ್ಟಂಬರ್ ನಲ್ಲಿ ಜಿಎಸ್​ಟಿ ಮಂಡಳಿ ಸಭೆ ನಡೆಯಲಿದ್ದು, ಸಭೆಯಲ್ಲಿ ಜಿಎಸ್‌ಟಿ ದರ ಪರಿಷ್ಕರಣೆಗೆ ಸಂಬಂಧಿಸಿದಂತೆ ಮಹತ್ವದ ತೀರ್ಮಾನ ಕೈಗೊಳ್ಳಲಾಗುವುದು ಎನ್ನಲಾಗಿದ್ದು, ಪರಿಷ್ಕರಣೆಯಾಗಲಿರುವ ಎರಡನೇ ಹಂತದ ವಸ್ತುಗಳ ಪಟ್ಟಿಯನ್ನು ಸಮಿತಿ ಸಿದ್ಧಪಡಿಸುತ್ತಿದ್ದು, ಮುಂದಿನ ತಿಂಗಳು ನಡೆಯಲಿರುವ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಅದನ್ನು ಚರ್ಚಿಸಲಾಗುತ್ತದೆ ಎಂದು ತಿಳಿದುಬಂದಿದೆ.

ರಾಜ್ಯದ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವರ ಸಮಿತಿ ಜಿಎಸ್‌ಟಿ ಪರಿಷ್ಕರಣೆಯ ಎರಡನೇ ಸುತ್ತಿನ ಕಾರ್ಯ ಕೈಗೊಂಡಿದ್ದು, ಆಟೋಮೊಬೈಲ್, ಎಲೆಕ್ಟ್ರಿಕ್ ವಸ್ತುಗಳು, ಎಲೆಕ್ಟ್ರಿಕ್ ವಾಹನ, ಯೂರಿಯಾ ರಸಗೊಬ್ಬರ ಉತ್ಪಾದನೆ ಮಾಡುವಾಗ ಸಿದ್ಧ ಉತ್ಪನ್ನಗಳ ಮೇಲಿನ ತೆರಿಗೆಗಿಂತಲೂ ಅವುಗಳಿಗೆ ಬಳಸುವ ಕಚ್ಚಾವಸ್ತುಗಳ ಮೇಲಿನ ತೆರಿಗೆ ಹೆಚ್ಚಿನ ಪ್ರಮಾಣದಲ್ಲಿದ್ದು, ಇದನ್ನು ಹೊಂದಾಣಿಕೆ ಮಾಡಿ ಅಕ್ರಮ ತಪ್ಪಿಸುವುದೇ ಸರ್ಕಾರದ ಉದ್ದೇಶವಾಗಿದೆ ಎನ್ನಲಾಗಿದೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.