Gruhalakshmi Yojana | ಗೃಹಲಕ್ಷ್ಮಿ ಹಣದ ಬಗ್ಗೆ ಸರ್ಕಾರದಿಂದ ಬಿಗ್‌ ಅಪ್‌ಡೇಟ್‌ ; ಗೃಹಲಕ್ಷ್ಮಿಯರಿಗೆ ಗುಡ್ ನ್ಯೂಸ್

Gruhalakshmi Yojana : ಕರ್ನಾಟಕ ಸರ್ಕಾರದ ಗೃಹಲಕ್ಷ್ಮಿ ಯೋಜನೆಯಡಿ ಫಲಾನುಭವಿಗಳಿಗೆ ಜುಲೈ ಮತ್ತು ಆಗಸ್ಟ್ ತಿಂಗಳ ಬಾಕಿ ಕಂತುಗಳನ್ನು ಒಟ್ಟಿಗೆ ₹4000 ರೂಪಾಯಿಗಳಾಗಿ ಜಮೆ ಮಾಡಲಾಗಿದೆ. ಹಬ್ಬದ ಸಂದರ್ಭದಲ್ಲಿ ಈ ಹಣ ತಲುಪಿರುವುದರಿಂದ ಮಹಿಳೆಯರಲ್ಲಿ…

Gruhalakshmi yojana

Gruhalakshmi Yojana : ಕರ್ನಾಟಕ ಸರ್ಕಾರದ ಗೃಹಲಕ್ಷ್ಮಿ ಯೋಜನೆಯಡಿ ಫಲಾನುಭವಿಗಳಿಗೆ ಜುಲೈ ಮತ್ತು ಆಗಸ್ಟ್ ತಿಂಗಳ ಬಾಕಿ ಕಂತುಗಳನ್ನು ಒಟ್ಟಿಗೆ ₹4000 ರೂಪಾಯಿಗಳಾಗಿ ಜಮೆ ಮಾಡಲಾಗಿದೆ. ಹಬ್ಬದ ಸಂದರ್ಭದಲ್ಲಿ ಈ ಹಣ ತಲುಪಿರುವುದರಿಂದ ಮಹಿಳೆಯರಲ್ಲಿ ಸಂತಸ ಮೂಡಿದೆ.

ಫಲಾನುಭವಿಗಳು ತಮ್ಮ ಖಾತೆಗೆ ಹಣ ಜಮೆ ಆಗಿದೆಯೇ ಎಂದು ಮೊಬೈಲ್ ಬ್ಯಾಂಕಿಂಗ್, SMS ಮೂಲಕ ಅಥವಾ ಸೇವಾ ಸಿಂಧು ಪೋರ್ಟಲ್‌ನಲ್ಲಿ ರೇಷನ್ ಕಾರ್ಡ್/ಅರ್ಜಿ ಸಂಖ್ಯೆ ನೀಡಿ ಪರಿಶೀಲಿಸಬಹುದು. DBT ಕರ್ನಾಟಕ ಆ್ಯಪ್ ಅಥವಾ 8147500500/8277000555 ಸಂಖ್ಯೆಗಳಿಗೆ SMS ಕಳುಹಿಸುವ ಮೂಲಕವೂ ಮಾಹಿತಿ ಪಡೆಯಬಹುದು.

ಗಣೇಶ ಹಬ್ಬಕ್ಕೆ ಮುನ್ನ ‘ಗೃಹಲಕ್ಷ್ಮಿ’ ಬಾಕಿ ಹಣ ಬಿಡುಗಡೆ.!

ರಾಜ್ಯದ ಮಹಿಳೆಯರಿಗೆ ಸರ್ಕಾರ ಇದೀಗ ಸಿಹಿ ಸುದ್ದಿ ನೀಡಿದ್ದು, ಗಣೇಶ ಹಬ್ಬಕ್ಕೆ ಮುನ್ನವೇ ಗೃಹಲಕ್ಷ್ಮಿ ಹಣ ಬಿಡುಗಡೆ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ತಿಳಿಸಿದ್ದಾರೆ. ಹೌದು, ಉಡುಪಿಯಲ್ಲಿ ಮಾತನಾಡಿದ ಅವರು, ಗೃಹಲಕ್ಷ್ಮಿಯೋಜನೆಯ ಜೂನ್ ತಿಂಗಳ ಹಣ ಬಿಡುಗಡೆ ಮಾಡಲಾಗಿದೆ. ಗಣೇಶ ಚತುರ್ಥಿ ಒಳಗೆ ಜುಲೈ ತಿಂಗಳ ಹಣವೂ ಬಿಡುಗಡೆಯಾಗಲಿದೆ ಎಂದು ಭರವಸೆ ನೀಡಿದರು. ಜೂನ್ ತಿಂಗಳ ಎರಡು ಸಾವಿರ ರೂ. ವರಮಹಾಲಕ್ಷ್ಮಿ ಹಬ್ಬಕ್ಕೆ ಜಮಾ ಮಾಡಲಾಯಿತು ಎಂದರು.

Vijayaprabha Mobile App free

ಗೃಹಲಕ್ಷ್ಮಿ ಯೋಜನೆ; ಈ ನಿಯಮಗಳನ್ನು ಪಾಲಿಸದಿದ್ದರೆ ಹಣ ಇಲ್ಲ

ಗೃಹಲಕ್ಷ್ಮಿ ಯೋಜನೆಯಡಿ ಎಲ್ಲ ಮಹಿಳೆಯರಿಗೂ ಹಣ ಸಿಗುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದ್ದು, ಸರ್ಕಾರದ ನಿಯಮಗಳಂತೆ ಕೆಲವೊಂದು ಅಗತ್ಯ ಮಾಹಿತಿ ಹಾಗೂ ದಾಖಲೆಗಳನ್ನು ನವೀಕರಿಸದವರ ಖಾತೆಗೆ ಹಣ ಜಮಾಗುವುದಿಲ್ಲ.

  • ಕೆವೈಸಿ ಅಪ್ಡೇಟ್ ಮಾಡದವರು
  • ಆಧಾರ್ ಲಿಂಕ್ ಇಲ್ಲದ ಬ್ಯಾಂಕ್ ಖಾತೆ
  • ಪ್ಯಾನ್ ಕಾರ್ಡ್ ಲಿಂಕ್ ಮಾಡದವರು
  • ಮೊಬೈಲ್ ನಂಬರ್ ಲಿಂಕ್ ಇಲ್ಲದವರು
  • NPCI ಮ್ಯಾಪಿಂಗ್ ಆಗಿಲ್ಲದವರು
  • ಬಿಪಿಎಲ್ ಕಾರ್ಡ್ ಪಡಿತರ ಚೀಟಿ ರದ್ದಾದವರಿಗೆ.
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.